ಬೇಕಾದ ಸಾಮಗ್ರಿಗಳು

1 ರವೆ- ನಾಲ್ಕು ಕಪ್ಪು
2 ಉದ್ದಿನ ಬೇಳೆ- ಒಂದು ಮುಕ್ಕಾಲು ಕಪ್ಪು
3 ಕೊತ್ತಂಬರಿ ಸೊಪ್ಪು- ಸ್ವಲ್ಪ
4 ಕ್ಯಾರೆಟ್-ಸಣ್ಣದು ಒಂದು
5 ಉಪ್ಪು- ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ:

1. ಉದ್ದು ನಾಲ್ಕು ಗಂಟೆ ನೆನೆಯಲು ಇರಿಸಿರಿ
2 ರವೆಯನ್ನು ಸ್ವಲ್ಪ ಬಿಸಿಯಿರುವ ನೀರಿನಲ್ಲಿ ನಾಲ್ಕು ಗಂಟೆ ಇರಿಸಿರಿ
3 ಉದ್ದಿನ ಬೇಳೆಯನ್ನು ಮಿಕ್ಸಿಯಲ್ಲಿ ರುಬ್ಬಿರಿ
4 ರವೆಯ ನೀರು ತೆಗೆದ ಬಳಿ ಸ್ವಲ್ಪ ಸಾಮಾನ್ಯ ನೀರು ಹಾಕಿ ಕೈಯಿಂದ ತಿರುವಿರಿ, ಮತ್ತು ಅಕ್ಕಿ ಅರೆದದ್ದಕ್ಕೆ ಸೇರಿಸಿ ಮಿಕ್ಸ್ ಮಾಡಿ
5 ಉಪ್ಪು ತಕ್ಕಹಾಗೆ ಸೇರಿಸಿರಿ.
6 ಈ ಮಿಶ್ರಣವನ್ನು ಹುಳಿ ಬರಲು ಒಂದು ರಾತ್ರೆ ಪೂರ್ತಿ ಹಾಗೆಯೆ ಇರಿಸಿರಿ
7. ಮರು ದಿವಸ ಈ ಮಿಶ್ರಣಕ್ಕೆ ಕೊತ್ತಂಬರಿ ಸೊಪ್ಪು ಕ್ಯಾರೆಟ್ ಗ್ರೇಟ್ ಮಾಡಿದ್ದು ಸೇರಿಸಿರಿ
8 ಇದನ್ನುಇಡ್ಲಿಯ ತಟ್ಟಿಗೆ ಒಯ್ಯಿರಿ .ಆವಿಗಿಡಿರಿ. (ಉದ್ದು ಅರೆಯುವಾಗ ಕಡಿಮೆ ನೀರು ಉಪಯೋಗಿಸಿರಿ.ಹಾಗೆ ಮಾಡಿದರೆ ಒಳ್ಳೆಯ ಇಡ್ಲಿ ಆಗುತ್ತದೆ)
9 ಇದನ್ನು ಚಟ್ನಿ ಸೇರಿಸಿ ತಿನ್ನಿರಿ.

Leave a Reply