ಕೋಲಾರ – ಇಲ್ಲಿನ ತಾಜುಮ್ಮಲ್ ಪಾಷಾ ಮತ್ತು ಮುಜಮ್ಮಿಲ್ ಪಾಷಾ ಎಂಬಿದ್ದರೂ ಉದ್ಯಮಿ ಸಹೋದರರು 25 ಲಕ್ಷ ರೂಪಾಯಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಿ ಬಂದ ಹಣದಿಂದ ಕೊರೋನಾದಿಂದಾಗಿ ಸಂತ್ರಸ್ತರಾದ ಬಡವರು ಮತ್ತು ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ತೀರ್ಮಾನಿಸಿದ್ದಾರೆ.

ಲಾಕ್ ಡೌನ್ ಕಾರಣದಿಂದಾಗಿ ದಿನಗೂಲಿ ಕಾರ್ಮಿಕರು, ಅವರ ಕುಟುಂಬಗಳು ಮತ್ತು ವಲಸೆ ಕಾರ್ಮಿಕರು ಬಳಲುತ್ತಿರುವುದನ್ನು ನೋಡಿದ ಈ ಇಬ್ಬರು ಸಹೋದರರು ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದಾರೆ ಮತ್ತು ಬಂದ ಹಣದಿಂದ ಈಗಾಗಲೇ ತೈಲ ಮತ್ತು ಆಹಾರ ಧಾನ್ಯಗಳನ್ನು ಖರೀದಿಸಿದ್ದಾರೆ. ಅಲ್ಲದೆ, ತಮ್ಮ ಮನೆಯ ಪಕ್ಕದಲ್ಲಿ ಒಂದು ಟೆಂಟನ್ನು ಸ್ಥಾಪಿಸಿ ಕಷ್ಟದಲ್ಲಿರುವವರಿಗೆ ಆಹಾರ ತಯಾರಿಸುವುದಕ್ಕಾಗಿ ಸಮುದಾಯ ಅಡುಗೆ ಮನೆಯನ್ನು ಪ್ರಾರಂಭಿಸಿದ್ದಾರೆ www.ndtv.com ವರದಿ ಮಾಡಿದೆ.

ನಾವು ಚಿಕ್ಕವರಿರುವಾಗಲೇ ತಂದೆ ನಿಧನರಾದರು. ಆದ್ದರಿಂದ ನಾವು ಕೋಲಾರದಲ್ಲಿರುವ ನಮ್ಮ ಅಜ್ಜಿಯ ಮನೆಗೆ ಸ್ಥಳಾಂತರಗೊಂಡೆವು. ಆಗ ಸಮಾಜದ ಹಿಂದೂಗಳು ಸಿಕ್ಕರು ಮುಸ್ಲಿಮರು ಯಾವುದೇ ಧಾರ್ಮಿಕ ಭೇದ ಭಾವವಿಲ್ಲದೆ ನಮಗೆ ನೆರವು ನೀಡಿದ್ದರು ಎಂದು ತಾಜುಮ್ಮಲ್ ಪಾಷಾ ಹೇಳಿದ್ದಾರೆ. ಈ ಸಹೋದರರು ಬಾಳೆ ಕೃಷಿ ಮತ್ತು ರಿಯಲ್ ಎಸ್ಟೇಟ್ ಅನ್ನು ನಡೆಸುತ್ತಿದ್ದಾರೆ.

ನಾವು ಬಡತನದಲ್ಲಿ ಬೆಳೆದಿದ್ದೇವೆ. ಸಮಾಜದ ಎಲ್ಲ ಧರ್ಮದ ಮಂದಿ ನಮಗೆ ಬೆಂಗಾವಲಾಗಿ ನಿಂತ್ತಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಈ ಸಮಾಜದ ಋಣ ತೀರಿಸಲು ನಾವು ಪಣತೊಟ್ಟಿದ್ದೇವೆ. ನಾವೀಗಾಗಲೇ ನಮ್ಮ ಭೂಮಿಯನ್ನು ಸೊಸೈಟಿ ಅಗ್ರಿಮೆಂಟ್ ಬಾಂಡ್ ಮೂಲಕ ನಮ್ಮ ಗೆಳೆಯನಿಗೆ ಮಾರಿದ್ದೇವೆ ಎಂದು ಅವರು ಹೇಳಿದ್ದಾರೆ.

ಲಾಕ್ ಡೌನ್ ಮುಗಿದ ಬಳಿಕ ನಾವು ಭೂಮಿ ಮಾರಾಟವನ್ನು ರಿಜಿಸ್ಟರ್ ಕಚೇರಿಗೆ ಹೋಗಿ ವರ್ಗಾವಣೆ ಇತ್ಯಾದಿ ಕ್ರಮಗಳನ್ನು ಪೂರೈಸುತ್ತೇವೆ ಎಂದು ಅವರು ಹೇಳಿದ್ದಾರೆ. ಈವರೆಗೆ ಈ ಇಬ್ಬರು ಸಹೋದರರು 3000ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯ, ತೈಲ, ಸಕ್ಕರೆ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಹ್ಯಾಂಡ್ ಸಾನಿಟೈಝೆರ್ ಮತ್ತು ಮುಖಗವಸುಗಳನ್ನು ಕೂಡ ನೀಡಿದ್ದಾರೆ. ಕೋಲಾರ ಜಿಲ್ಲಾಡಳಿತವು ಇವರ ಅಧೀನದಲ್ಲಿರುವ ಸ್ವಯಂಸೇವಕರಿಗೆ ಪಾಸ್ ಗಳನ್ನು ನೀಡಿ ಸಹಕರಿಸಿದೆ.

Leave a Reply