ಚಿಟ್ಟೂರ್: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಕೇರಳದ ಪಾಲಕ್ಕಾಡಿನಲ್ಲಿ ಹೆಂಡತಿ ಮಕ್ಕಳನ್ನು ಕೊಂದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಎರ್ನಾಕುಳಂ ಚಿಟ್ಟೂರಿನ ಮಾಣಿಕ್ಯ ಎಂಬಾತ ತನ್ನ ಪತ್ನಿ ಕುಮಾರಿ, ಮಕ್ಕಳಾದ ಮೇಘಾ, ಮನೋಜ್‍ರನ್ನು ಕೊಲೆ ಮಾಡಿ ನಿರ್ವಿಕಾರವಾಗಿ ಪೊಲೀಸರ ಮುಂದೆ ಹಾಜರಾಗಿದ್ದಾನೆ.
ಪತ್ನಿಯೊಂದಿಗೆ ವಿರಸವೇ ಆತನಿಂದಾದ ಸಾಮೂಹಿಕ ಹತ್ಯೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ರಾತ್ರೆ ನಿರ್ದಯ ಕೃತ್ಯವನ್ನು ಆತ ಕಾರ್ಯರೂಪಕ್ಕಿಳಿಸಿದ್ದನು.
ಪತ್ನಿಮಕ್ಕಳನ್ನು ಕೊಂದ ಬಳಿಕ ಪೊಲೀಸ್ ಠಾಣೆಗೆ ಹೋಗಿ ಆರೋಪಿಯೇ ತಾನು ಮಾಡಿದ ಕೃತ್ಯವನ್ನು ಹೇಳಿದ್ದು, ಯಾರನ್ನೆಲ್ಲ ಕೊಂದೆ, ಯಾಕೆ ಕೊಂದೆ ಎಂದು ಆತ ವಿವರಿಸಿದ್ದಾನೆ.
ದಂಪತಿ ನಡುವೆ ಪರಸ್ಪರ ಜಗಳವಾಗಿ ತುಂಬ ದಿವಸಗಳಿಂದ ಅವರಿಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದರು. ಕೆಲವು ದಿವಸಗಳ ಪುನಃ ಮಾಣಿಕ್ಯನ್ ಮತ್ತು ಕುಮಾರಿ ಒಟ್ಟಿಗೆ ವಾಸಿಸ ತೊಡಗಿದ್ದರು. ಆದರೂ ಇವರ ನಡುವೆ ಪದೇ ಪದೇ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ನೆರೆಮನೆಯವರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಮಾಣಿಕ್ಯ ನ್ ಮತ್ತು ಕುಟುಂಬವು ಚಿಟ್ಟೂರ್ ಸಮೀಪದ ಕೊಯಿಜಿಂಬಾರದಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿತ್ತು. ಇಬ್ಬರು ಧೋಬಿಯಾಗಿ ದುಡಿಯುತ್ತಿದ್ದರು. ಶವ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಪೋಸ್ಟ್‍ಮಾರ್ಟಂಗೆ ಕಳುಹಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಇಬ್ಬರ ಜಗಳದಲ್ಲಿ ಅಮಾಯಕ ಮಕ್ಕಳ ಜೀವನಕ್ಕೆ ದಾರುಣ ಅಂತ್ಯ.