ಬೇಕಾಗುವ ಸಾಮಗ್ರಿ:

ಕೋಳಿ – 1 ಕೆ.ಜಿ, ಬಾಸ್ಮತಿ ಅಕ್ಕಿ – 1 ಕೆ.ಜಿ, ಪುದೀನ – ಅರ್ಧ ಕಪ್, ಕೊತ್ತಂಬರಿ ಎಲೆ – ಅರ್ಧ ಕಪ್, ನೀರುಳ್ಳಿ – 4/5, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 3 ಟೀಸ್ಪೂನ್, ಮೆಣಸಿನ ಹುಡಿ – 2 ಟೀಸ್ಪೂನ್ (ರುಚಿಗೆ ತಕ್ಕಷ್ಟು), ಹಳದಿ ಹುಡಿ ಅರ್ಧ ಟೀಸ್ಪೂನ್, ಏಲಕ್ಕಿ – 6, ದೊಡ್ಡ ಏಲಕ್ಕಿ – 2, ಲವಂಗ – 12, ಕೆತ್ತೆ – 2 ತುಂಡು, ದಾಲ್ಚೀನಿ ಎಲೆ – 2, ಮೊಸರು – 1 ಕಪ್, ನಿಂಬೆ – 2, ಉಪ್ಪು ರುಚಿಗೆ, ಎಣ್ಣೆ/ ತುಪ್ಪ – ಒಂದುವರೆ ಕಪ್.

ತಯಾರಿಸುವ ವಿಧಾನ:

ಕೋಳಿಯನ್ನು ತೊಳೆದು ಅದಕ್ಕೆ ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪÅ, ಹಳದಿ ಹುಡಿ, ಚಿಕನ್ ಮಸಾಲ, ಮೊಸರು ಸೇರಿಸಿ ಕೆಲವು ನಿಮಿಷಗಳ ಕಾಲ ಇಡಿ.
ಎಣ್ಣೆ/ತುಪ್ಪವನ್ನು ಬಿಸಿ ಮಾಡಿ. ಸಣ್ಣಗಾಗಿ ಕತ್ತರಿಸಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಟ್ಟುಕೊಳ್ಳಿ.
ಈ ಎಣ್ಣೆ / ತುಪ್ಪವನ್ನು ಕೋಳಿಗೆ ಸೇರಿಸಿ.

ಇನ್ನೊಂದು ಪಾತ್ರೆಯಲ್ಲಿ ಅಕ್ಕಿ ಬೇಯಿಸಲು ನೀರು ಬಿಸಿ ಮಾಡಿ. ಅದಕ್ಕೆ ಎರಡು ರೀತಿಯ ಏಲಕ್ಕಿ, ಲವಂಗ, ಕೆತ್ತೆ, ದಾಲ್ಚೀನಿ ಎಲೆ ಮತ್ತು ಉಪ್ಪು ಹಾಕಿ ಬಿಸಿ ಮಾಡಿ. ನೀರು ಕುದಿಯಲು ಆರಂಭಿಸಿದಾಗ ಅಕ್ಕಿ ತೊಳೆದು ಹಾಕಿ. ಮುಕ್ಕಾಲು ಅಂಶ ಬೆಂದಾಗ ನೀರನ್ನು ಬಸಿಯಿರಿ.

ಒಂದು ಪಾತ್ರೆಯಲ್ಲಿ ಕೋಳಿಯನ್ನು ಬೇಯಿಸಲು ಇಡಿ. ಬೇಯಿಸುವಾಗ ಸ್ವಲ್ಪ ಪುದೀನ ಮತ್ತು ಕೊತ್ತಂಬರಿ ಎಲೆಯನ್ನು ಹಾಕಿ ಅದರ ಮೇಲೆ ಫ್ರೈ ಮಾಡಿದ ನೀರುಳ್ಳಿ, ಕತ್ತರಿಸಿದ ಪುದೀನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ.

ನಿಂಬೆ ರಸದಲ್ಲಿ ಹಳದಿ ಹುಡಿ ಸೇರಿಸಿ. ಅನ್ನದ ನಡುವಿನಲ್ಲಿ ಸಣ್ಣ ಸಣ್ಣ ತೂತು ಮಾಡಿ ಅದರಲ್ಲಿ ಹಾಕಿ ಪಾತ್ರೆಯ ಮುಚ್ಚಳ ಗಟ್ಟಿಯಾಗಿ ಮುಚ್ಚಿ ಅದರ ಹಬೆ ಹೊರಗೆ ಹೋಗದಂತೆ ನೋಡಿ ಸಣ್ಣ ಉರಿಯಲ್ಲಿ ಇಪ್ಪತ್ತು ನಿಮಿಷ ಇಡಿ.

Leave a Reply