ಸತ್ತ ಮನುಷ್ಯ ಮತ್ತೆ ಜೀವಂತವಾಗಿರುವುದನ್ನು ನೀವು ಯಾವಾಗಲಾದರೂ ಕೇಳಿದ್ದೀರಾ? ಹೌದು ಇದು ಧಾರಾವಾಹಿಗಳಲ್ಲಿ, ಸಿನೆಮಾದಲ್ಲಿ ನಡೆಯುತ್ತದೆ. ಆದರೆ, ಇಲ್ಲಿ ನಿಜ ಜೀವನದಲ್ಲಿ ಹಾಗಾಗಿದೆ.
ಉತ್ತರ ಪ್ರದೇಶದ ರೈತ ಲಾಲ್ ಬಿಹಾರಿಯವರು ಸುಮಾರು 18 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರಕಾರ ದಾಖಲೆಗಳಲ್ಲಿ ಹೇಳಲಾಗಿತ್ತು. ‘ಮೃತಾಕ್’ ಎಂದು ಕರೆಯಲ್ಪಡುವ “ಮರಣ ಹೊಂದಿದರು” ಎಂದೇ ಜನಪ್ರಿಯವಾಗಿರುವ ಬಿಹಾರಿ ಅವರನ್ನು ಸತ್ತ ಘೋಷಿಸಿದ್ದಕ್ಕಾಗಿ ರಾಜ್ಯದಿಂದ ಪರಿಹಾರ ನೀಡಬೇಕೆಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ಕೋರಿದ್ದಾರೆ. ನ್ಯಾಯಾಲಯ ಜನವರಿ 18 ರಂದು ತೀರ್ಪು ನೀಡಲಿದೆ.
ಆಸ್ತಿಯನ್ನು ಮುಟ್ಟುಗೋಲು ಹಾಕಲು ಕುಟುಂಬದ ಸದಸ್ಯರೋರ್ವರಿಂದ ಇಂತಹ ಪಿತೂರಿ ನಡೆದಿದೆ ಎನ್ನಲಾಗಿದೆ.
“ಜೀವಂತವಾಗಿದ್ದೇನೆ ಎಂದು ಸಾಬೀತು ಪಡಿಸಲು 18 ವರ್ಷಗಳ ದೀರ್ಘಾವಧಿ ಹೋರಾಟ ಮಾಡಬೇಕಾಯಿತು ಎಂದು ಲಾಲ್ ಬಿಹಾರಿ ಹೇಳುತ್ತಾರೆ.