ಉಡುಪಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬೂಟಾಟಿಕೆಗೆ ಖಾವಿ ಹಾಕೊಂಡಿದ್ದಾನೆ. ನಾನು ಯೋಗಿಗಿಂತ ಒಳ್ಳೆಯ ಹಿಂದೂ. ಅವರಿಗೆ ಮನುಷ್ಯತ್ವ ಇಲ್ಲ. ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದ ಯೋಗಿ ಸ್ವಲ್ಪ ಸ್ವಾಮಿ ವಿವೇಕಾನಂದರನ್ನು ಓದಿಕೊಳ್ಳಲಿ. ಅವರಿಗೆ ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲೆ ಕಾಪುವಿನಲ್ಲಿ ನಡೆದ ಶಂಕುಸ್ಥಾಪನೆ ಮತ್ತು ಸಾಧನಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಯೋಗಿ ಹಸು ಎಮ್ಮೆ ಸಾಕಿದ್ದಾನಾ? ಹಸುವಿನ ಸಗಣಿ ಎತ್ತಿ, ಗೊಬ್ಬರ ಹೊತ್ತಿದ್ದಾನಾ? ಹಸು ಸಾಕದವರು ಗೋವು ಬಗ್ಗೆ ಪಾಠ ಮಾಡುತ್ತಾರೆ. ನಾನು ಮನೆಯಲ್ಲಿ ಸಗಣಿ ಎತ್ತಿದ್ದೇನೆ, ತಲೆಮೇಲೆ ಗೊಬ್ಬರ ಹೊತ್ತಿದ್ದೇನೆ. ಯೋಗಿ ಒಬ್ಬ ಡೋಂಗಿ ವ್ಯಕ್ತಿ ಎಂದು ಏಕವಚನದಲ್ಲಿ ಲೇವಡಿ ಮಾಡಿದರು.

Leave a Reply