ಚಿಕ್ಕಮಗಳೂರಿನ, ಮೂಡಿಗೆರೆಯ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಧನ್ಯಾ ಆತ್ಮಹತ್ಯೆಗೆ ಆಕೆ ಹಾಕಿದ “ಐ ಲವ್ ಮುಸ್ಲಿಮ್ಸ್” ಎಂಬ ಹ್ಯಾಷ್ ಟ್ಯಾಗ್ ಕಾರಣವೆಂದು ತಿಳಿದು ಬಂದ ಬೆನ್ನಲ್ಲೇ ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ಪ್ ಬಳಕೆದಾರರು ಐ ಲವ್ ಮುಸ್ಲಿಮ್ಸ್, ಐ ಲವ್ ಹಿಂದೂಸ್ ಎಂದು ಪರಸ್ಪರ ಹಿಂದೂ ಮುಸ್ಲಿಮ್ಸ್ ಹ್ಯಾಷ್ ಟ್ಯಾಗ್ ಹಾಕಲು ಶುರುವಿಟ್ಟುಕೊಂಡಿದ್ದಾರೆ. ಈ ಹ್ಯಾಷ್ ಟ್ಯಾಗ್ ಅಭಿಯಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಕಳೆದ ಮೂರು ದಿನಗಳ ಹಿಂದೆ ಮೂಡಿಗೆರೆಯ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಧನ್ಯಾ ಎಂಬ ವಿದ್ಯಾರ್ಥಿನಿ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸಾವಿಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೇ ನೇರ ಹೊಣೆ, ಐ ಲವ್ ಮುಸ್ಲಿಮ್ಸ್ ಎಂದು ವಾಟ್ಸಾಪ್ಪ್ ಸ್ಟೇಟಸ್ ಹಾಕಿದ್ದರಿಂದ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಅಣ್ಣಾಮಲೈ ಬಂಧಿಸಿದ್ದರು.

ಧನ್ಯಾ ಸಾವಿಗೆ ಮಾನಸಿಕ ಕಿರುಕುಳ ಕಾರಣ ಎಙದು ತಿಳಿಯುತ್ತಿದಂತೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ಪ್ ಬಳಕೆದಾರರು ಪರಸ್ಪರ ಈ ಲವ್ ಯು ಮುಸ್ಲಿಂ ಅಥವಾ ಹಿಂದೂ ಎಂದು ಪರಸ್ಪರ ಹ್ಯಾಷ್ ಟ್ಯಾಗ್ ಅಭಿಯಾನ ಮಾಡುವ ಮೂಲಕ ಸಂಘಟಕರಿಗೆ ಸವಾಲು ಹಾಕಿದ್ದಾರೆ. ಈ ಹ್ಯಾಷ್ ಟ್ಯಾಗ್ ನಲ್ಲಿ ದೇಶ ವಿದೇಶದಲ್ಲಿರುವ ಹಿಂದೂ-ಮುಸ್ಲಿಮರು ಪಾಲ್ಗೊಂಡಿದ್ದಾರೆ. ಅದಲ್ಲದೆ ಇದರ ಬಿಸಿ ಹೊರ ರಾಜ್ಯಕ್ಕೂ ಮುಟ್ಟಿದೆ.

Leave a Reply