1. ಬಾರ್ಲಿ: ಜ್ವರಕ್ಕೆ ಬಹಳ ಉಪಯುಕ್ತವಾಗಿದೆ. ತಿಳಿಗಂಜಿ ಅಥವಾ ಸೂಪ್ ಮಾಡಿ ಸೇವಿಸಿದರೆ ಉತ್ತಮ.

2. ಖರ್ಜೂರ: ಖರ್ಜೂರ ಇಲ್ಲದ ಮನೆಯಲ್ಲಿ ಆಹಾರವೇ ಇಲ್ಲ ಎನ್ನಬಹುದು. ಹೆರಿಗೆಯ ಸಂದರ್ಭಗಳಲ್ಲಿ ಖರ್ಜೂರವನ್ನು
ಸೇವಿಸುವುದು ಒಳ್ಳೆಯದು.

3. ಅಂಜೀರ: ಇದೊಂದು ಸ್ವರ್ಗದ ಹಣ್ಣು ಮತ್ತು ಇದರಲ್ಲಿಮೂಲವ್ಯಾಧಿಗೆ ಉತ್ತಮ ಮದ್ದು ಇದೆ.

4. ದ್ರಾಕ್ಷಿ: ಬಹಳ ಪ್ರಿಯವಾದ ಹಣ್ಣು. ರಕ್ತವನ್ನು ಶುದ್ಧೀಕರಿಸುತ್ತದೆ. ಆರೋಗ್ಯವನ್ನು ಗಟ್ಟಿಗೊಳಿಸುತ್ತದೆ ಹಾಗೂ ಹುರುಪು
ಹೆಚ್ಚಿಸುತ್ತದೆ. ಮೂತ್ರಕೋಶವನ್ನು ಶುದ್ಧೀಕರಿಸುತ್ತದೆ.

5. ಜೇನು: ಬಿಸಿ ನೀರಿನಲ್ಲಿ ಕಲಸಿ ಕುಡಿಯುವುದರಿಂದಬೇಧಿಗೆ ಉತ್ತಮ ಮದ್ದು. ಇದು ಆಹಾರಗಳಲ್ಲಿ ಉತ್ತಮ
ಆಹಾರ, ಪಾನೀಯಗಳಲ್ಲಿ ಉತ್ತಮ ಪಾನೀಯ ಹಾಗೂ ಮದ್ದುಗಳಲ್ಲಿ ಅತ್ಯುತ್ತಮ ಮದ್ದು ಆಗಿದೆ. ಇದನ್ನು ಹಸಿವು ಹೆಚ್ಚಿಸಲು,
ಜಠರಕ್ಕೆ ಹಾಗೂ ಜೀರ್ಣಕ್ರಿಯೆಗೆ ಬಲ ಹೆಚ್ಚಿಸಲು, ಮಾಂಸಗಳನ್ನುಸಂರಕ್ಷಿಸಿಡಲು, ಕೂದಲಿಗೆ ಹೊಳಪು ಹೆಚ್ಚಿಸಲು, ಕಣ್ಣಿಗೆ ತಂಪು
ನೀಡಲು ಹಾಗೂ ಬಾಯಿ ಸ್ವಚ್ಛವಾಗಿಡಲು ಹೆಚ್ಚು ಉಪಯೋಗಿಸುತ್ತಾರೆ. ಬೆಳಗಿನ ಜಾವ ಉಗುರು ಬೆಚ್ಚಗಿನ ನೀರಿನೊಂದಿಗೆ
ಸೇವಿಸುವುದು ಆರೋಗ್ಯಕ್ಕೆ ಬಹಳ ಉತ್ತಮ.

6. ಕಲ್ಲಂಗಡಿ: ಇದನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಒಳ್ಳೆಯದು.

7. ಹಾಲು: ಹಣೆಯ ಬೆವರನ್ನು ಕೈ ಬೆರಳಿನಿಂದ ಒರೆಸಿದಂತೆ ಹೃದಯದಲ್ಲಿನ ಉಷ್ಣತೆಯನ್ನು ಹೋಗಲಾಡಿಸುತ್ತದೆ. ಬೆನ್ನು
ಮೂಳೆಗೆ ಶಕ್ತಿ ನೀಡುತ್ತದೆ, ಮೆದುಳನ್ನು ಚುರುಕುಗೊಳಿಸುತ್ತದೆ. ಕಣ್ಣನ್ನು ತಂಪಾಗಿಡುತ್ತದೆ. ಮರೆಗುಳಿತನವನ್ನು ದೂರ ಮಾಡುತ್ತದೆ.

8. ಅಣಬೆ(ಮಶ್ರೂಮ್): ಕಣ್ಣು ಬೇನೆಗೆ ಅತ್ಯುತ್ತಮ ಮದ್ದು. ಸಂತಾನ ನಿಯಂತ್ರಣದಲ್ಲೂ ಇದು ಅತ್ಯುತ್ತಮ ಪಾತ್ರ ನಿರ್ವಹಿಸುತ್ತದೆ.
ಪಕ್ಷವಾತಕ್ಕೂ ಇದು ಅತ್ಯುತ್ತಮವಾಗಿದೆ.

9. ಆಲಿವ್: ಚರ್ಮ ಹಾಗೂ ಕೂದಲಿಗೆ ಆಲಿವ್ ಎಣ್ಣೆ ಅತ್ಯುತ್ತಮ. ಆಲಿವ್ ಎಣ್ಣೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯು
ತ್ತದೆ ಹಾಗೂ ಹೊಟ್ಟೆಯ ಉರಿಯೂತಕ್ಕೆ ಪರಿಣಾಮಕಾರೀ ಔಷಧಿಯಾಗಿದೆ.

10. ನೀರು: ಬಾಯಾರಿಕೆಯಾದಾಗ ನಿಮಗೆ ಲೋಕದಲ್ಲೇ ಅತ್ಯುತ್ತಮ ಪಾನೀಯವಾಗಿದೆ. `ನೀರು’. ನೀರನ್ನು ಕುಳಿತುಕೊಂಡು
ಗುಟುಕು ಗುಟುಕಾಗಿ ಕುಡಿಯಬೇಕು.

Leave a Reply