ಐಐಟಿ ಪ್ರೊಫೆಸರ್ ಗಳಿಂದ ಕಾಂಕ್ರೀಟ್ ಶೆಲ್ಟರ್ ಹೋಂಗಳ ಸ್ಥಾಪನೆಯಿಂದ ಒಡಿಶಾ ದಲ್ಲಿ ಅಪ್ಪಳಿಸಿದ ಫನಿ ಚಂಡಮಾರುತದ ಹೊರತಾಗಿಯೂ ಸಾವಿರಾರು ಜನರ ಜೀವಗಳು ಉಳಿದಿದೆ. ಐಐಟಿ ಪ್ರೊಫೆಸರ್ ಗಳು ಉತ್ತಮ ಕಾಂಕ್ರೀಟಿನಿಂದ ವಿನ್ಯಾಸ ಮಾಡಿದ ಶೆಲ್ಟರ್ ಹೋಂ ಗಳಿಂದಾಗಿ ಒಡಿಶಾದಲ್ಲಿ ಬಂದ ಚಂಡಮಾರುತ ಫನಿ ಯಲ್ಲಿ ಸಾವಿರಾರು ಜನರ ಜೀವ ಉಳಿದಿದೆ. ನಿಜವಾಗಿ 1999ರಲ್ಲಿ ಬಂದ ಸೂಪರ್ ಸೈಕ್ಲೋನ್ ನಿಂದ ಉಂಟಾದ ಸ್ಥಿತಿಯಿಂದ ರಕ್ಷಿಸಿಕೊಳ್ಳಲು ಐಐಟಿ ಪ್ರೊಫೆಸರ್ ಗಳು, ವಿಪತ್ತು ನಿರ್ವಹಣಾ ವಿಭಾಗದ ಜತೆ ಸೇರಿ ಕಾಂಕ್ರೀಟ್ ನ ಶೆಲ್ಟರ್ ಹೋಂನ ಮೂಲ ಮಾದರಿಯನ್ನು 2004 ರಲ್ಲಿ ತಯಾರಿಸಿದ್ದರು. ಇದೀಗ ಆ ಬೆಳವಣಿಗೆಯಿಂದ ಈಗ ಬಂದ ಚಂಡಮಾರುತದ ವಿಪತ್ತನ್ನು ತಡೆದಂತೆ ಆಗಿದೆ. ಇಲ್ಲಿಯವರೆಗೆ ಹೀಗೆ 600 ಶೆಲ್ಟರ್ ಹೋಂ ಗಳನ್ನು ರಚಿಸಲಾಗಿದೆ.

ಫನಿ ಚಂಡ ಮಾರುತ ಅಪ್ಪಳಿಸಿದಾಗ ಜನರು ಈ ಶೆಲ್ಟರ್ ಹೋಮ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಕಟ್ಟಡಗಳು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದ್ದು, ಎಷ್ಟೇ ಭೀಕರ ಚಂಡಮಾರುತ ಅಪ್ಪಳಿಸಿದರೂ ಒಂದು ಮಟ್ಟದಲ್ಲಿ ಅದನ್ನು ತಡೆಯಲು ಇದು ಯಶಸ್ವಿಯಾಗಿದೆ.

Leave a Reply