ಇಸ್ಲಮಾಬಾದ್ ; ಮುಂದಿನ ಐದು ವರ್ಷಗಳಲ್ಲಿ ಪಾಕಿಸ್ತಾನವು ಯುರೋಪ್ ದೇಶಕ್ಕಿಂತ ಹೆಚ್ಚು ಸ್ವಚ್ಛವಾಗಿರುವುದು ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ಇಮ್ರಾನ್ ಖಾನ್ ರವರು ಶನಿವಾರ ಕ್ಲೀನ್ ಅಂಡ್ ಗ್ರೀನ್ ಪಾಕಿಸ್ತಾನ (ಸ್ವಚ್ಛ ಮತ್ತು ಹಸಿರು ಪಾಕಿಸ್ತಾನ) ಎಂಬ ಅಭಿಯಾನಕ್ಕೆ ಚಾಲನೆ ನೀಡುತ್ತಾ, ಅವರ ದೇಶ ಶುಚಿತ್ವದಲ್ಲಿ ಯೂರೋಪಿಗೆ ಸಡ್ಡು ಹೊಡೆಯಲಿದೆ ಎಂದು ಹೇಳಿದ್ದಾರೆ.

ಈ ಅಭಿಯಾನದಲ್ಲಿ ಡಿಸೆಂಬರ್ ವರೆಗೆ ದೇಶಾದ್ಯಂತ ಮರಗಳನ್ನು ನೆಡಲಾಗುವುದು. ಕಸ ವಿಲೇವಾರಿ ಮತ್ತು ಶುಚಿತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಿದರು.

ಜನರು ತಮ್ಮ ಮನೆಗಳನ್ನು ಸ್ವಚ್ಛವಾಗಿಡುತ್ತಾರೆ.. ಆದರೆ ತಮ್ಮ ಪರಿಸರ ಸಮಾಜದ ಬಗ್ಗೆ ಚಿಂತಿಸುವುದಿಲ್ಲ. ಈ ಮನಸ್ಥಿತಿ ಬದಲಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಈ ಅಭಿಯಾನದಲ್ಲಿ ಸಹಕರಿಸಬೇಕು ಎಂದು ಹೇಳಿದರು.

Leave a Reply