ಭಾರತ ಮತ್ತು ಪಾಕಿಸ್ತಾನದ ಸೈನಿಕರು ಒಟ್ಟಾಗಿ ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಹೋಗಿದೆ. ಬಾಲಿವುಡ್ ಮತ್ತು ಪಂಜಾಬಿ ಹಾಡುಗಳಿಗೆ ಅವರು ಕುಣಿಯುತ್ತಿದ್ದರು.

ಇಂಡಿಯನ್ ಆರ್ಮಿ ಆಯೋಜಿಸಿರುವ ‘ಭಾರತೀಯ ದಿವಾಸ್’ ಕಾರ್ಯಕ್ರಮದಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಪಾಲ್ಗೊಂಡಿದ್ದರು. ರಷ್ಯಾದಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ಸದಸ್ಯ ರಾಷ್ಟ್ರಗಳ ಸೈನಿಕರಿಗೆ ಆಯೋಜಿಸಿದ ಈ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಎರಡೂ ರಾಷ್ಟ್ರಗ ಸೈನಿಕರು ಡ್ಯಾನ್ಸ್ ಮಾಡಿದ್ದಾರೆ. ಭಾರತೀಯ ಮತ್ತು ಪಾಕಿಸ್ತಾನ ಸೇನೆಯ ಘಟಕಗಳು ಪ್ರಸ್ತುತ ಎಸ್.ಸಿ.ಒ ಜಂಟಿ ಮಿಲಿಟರಿ ಅಭ್ಯಾಸಕ್ಕಾಗಿ ರಷ್ಯಾದಲ್ಲಿವೆ. ಈ ಕಾರ್ಯಾಚರಣೆ ಆಗಸ್ಟ್ 22 ರಂದು ಪ್ರಾರಂಭವಾಗಿದ್ದು ನಿನ್ನೆ ಕೊನೆಗೊಂಡಿತು.

ಚೀನಾ, ರಷ್ಯಾ, ಕಝಾಕಿಸ್ತಾನ್, ತಜಿಕಿಸ್ತಾನ್, ಕಿರ್ಗಿಸ್ತಾನ್, ಭಾರತ ಮತ್ತು ಪಾಕಿಸ್ತಾನದ ಕನಿಷ್ಠ 3,000 ಸೈನಿಕರು ಈ ಡ್ರಿಲ್ನಲ್ಲಿ ಪಾಲ್ಗೊಂಡಿದ್ದರು

Leave a Reply