ದುಬೈ: ಈ ಬಾರಿ ದುಬೈ ನಲ್ಲಿ ನಡೆಯಲಿರುವ ಐಪಿಎಲ್ ಗೆ ವೇದಿಕೆ ಸಿದ್ಧವಾಗುತ್ತಿದೆ. ಎರಡನೇ ಬಾರಿಗೆ ದೇಶದ ಹೊರಗೆ ಅಂತಾರಾಷ್ಟ್ರೀಯವಾಗಿ ನಡೆಯಲಿರುವ ಐಪಿಎಲ್ ಪಂದ್ಯಾವಳಿ ಕೋವಿಡ್ ಆತಂಕದ ಮಧ್ಯೆಯೂ ಕೂಡ ಕ್ರಿಕೆಟ್ ಪ್ರೇಮಿಗಳನ್ನು ಭರಪೂರವಾಗಿ ರಂಜಿಸಲಿದೆ ಎಂದು ಹೇಳಲಾಗುತ್ತಿದೆ. ಈತನ್ಮಧ್ಯೆ ಉದಯೋನ್ಮುಖ ಆಟಗಾರ ಮುರುಗನ್ ಅಶ್ವಿನ್ ಹೆಮ್ಮೆಯ ಕನ್ನಡಿಗ ಲೆಗ್ ಸ್ಪಿನ್ ದಂತ ಕತೆ ಅನಿಲ್ ಕುಂಬ್ಳೆಯವರ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಮುರುಗನ್ ಅಶ್ವಿನ್

ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲು ಸಿದ್ಧವಾಗಿರುವ ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರು ಟ್ವೀಟ್ ಮಾಡಿ ””ನಾನು ಬೌಲ್ ಮಾಡಿದ ಮೊದಲ ಚೆಂಡು ಲೆಗ್ ಸ್ಪಿನ್ ಎಂದು ನಾನು ಭಾವಿಸುತ್ತೇನೆ. ಅದು ಏಕೆ ಎಂದು ನನಗೆ ತಿಳಿದಿದೆ. ನನಗೆ ಅದು ಸ್ವಾಭಾವಿಕವಾಗಿ ಬಂದಿದೆ. ನಾನು ಬಾಲ್ಯದಲ್ಲೇ ಅನಿಲ್ ಕುಂಬ್ಳೆ ಯವರಿಂದ ಪ್ರಭಾವಿತನಾಗಿದ್ದೆ. ಭಾರತೀಯ ಕ್ರಿಕೆಟ್ ನಲ್ಲಿ ನನಗೆ ಯಾವಾಗಲೂ ಅನಿಲ್ ಸರ್ ಪ್ರೇರಣೆ. ಬಹುಶಃ ನಾನು ಕ್ರಿಕೆಟಿಗನಾಗಿದ್ದೆ ಅವರನ್ನು ನೋಡಿ, ನಾನು ಅವರನ್ನು ನೋಡುತ್ತಾ ಬೆಳೆದಿದ್ದೇನೆ. ಅನಿಲ್ ಸರ್ ಆಡಿದ ಪ್ರತಿಯೊಂದು ಪಂದ್ಯವನ್ನೂ ನಾನು ತಪ್ಪದೆ ನೋಡಿದ್ದೇನೆ ”ಎಂದು ಅಶ್ವಿನ್ ತಮ್ಮ ಟ್ವೀಟ್ ನಲ್ಲಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here