ಕನೌಜ್ : ಗರ್ಭಿಣಿ ಪತ್ನಿಯ ಚಿಕಿತ್ಸೆಯ ವೆಚ್ಚ ಭರಿಸಲು ನಾಲ್ಕರ ಹರೆಯದ ಪುತ್ರಿಯನ್ನು ಮಾರಲು ತಂದೆಯೊಬ್ಬ ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದ ಕನೌಜ್ ನಲ್ಲಿ ನಡೆದಿದೆ. ಇಲ್ಲಿನ ಅರವಿಂದ್ ಬಂಜಾರಿ ಎಂಬಾತ ತನ್ನ ಏಳು ತಿಂಗಳ ಗರ್ಬಿಣಿ ಪತ್ನಿ ಸುಖದೇವಿಯ ಚಿಕಿತ್ಸೆಗಾಗಿ ಮಗಳನ್ನು ಮಾರಲು ಯತ್ನಿಸಿದ್ದಾನೆ.

ಗರ್ಭ ಸಂಬಂಧವಾದ ಕೆಲವು ತೊಂದರೆಗಳಿಂದ ಸುಖದೇವಿಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆಗಾಗಿ 25 ಸಾವಿರ ರೂಪಾಯಿಗೆ ತನ್ನ ಮಗಳು ರೋಶ್ನಿಯನ್ನು ಮಾರಲು ಯತ್ನಿಸಿದ್ದ. ನನ್ನಲ್ಲಿ ಹಣವಿಲ್ಲ ಒಂದರ ಹರೆಯದ ಜಾನಿ ಎಂಬ ಪುತ್ರನಿದ್ದಾನೆ. ಇದರ ಹೊರತು ನನಗೆ ಅನ್ಯ ದಾರಿಯಿರಲಿಲ್ಲ, ಈಗಾಗಲೇ ಹಲವು ಆಸ್ಪತ್ರೆಗೆ ಹೋಗಿದ್ದೇವೆ. ಬಂಜಾರ ಹೇಳಿದಾಗ ಪತ್ನಿ ಸುಖ ದೇವಿಯೂ ಬಳಿಯಿದ್ದಳು.

ಮಗಳನ್ನು ಮಾರಲು ಯತ್ನಿಸಿದಾಗ ಪೋಲೀಸ್ ಬಂದು ತಡೆದು ಆಸ್ಪತ್ರೆಯ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಪೋಲಿಸಧಿಕಾರಿ ಅಮೋದ್ ಕುಮಾರ್ ಸಿಂಗ್ ಹೇಳಿದ್ದಾರೆ.

Leave a Reply