ದೇಶದಲ್ಲಿ ಬಿಸಿಲ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು,ಜೊತೆಗೆ ಕೆಲವು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವಾಲಯ ಜನರಿಗೆ ಅನೇಕ ಟಿಪ್ಸ್ , ತಿಳುವಳಿಕೆ ನೀಡಿದೆ.

ಬಿಸಿಲತಾಪ ಹೆಚ್ಚಾಗಿರುವ ಅವಧಿಯಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ ಮೂರು ಗಂಟೆಯವರೆಗೆ ಜನರು ಮನೆಯಿಂದ ಹೊರಗೆ ಬರಬಾರದು.

ಮೇಲಾಗಿ ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನು ತೊಡಬೇಕು.

ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರು ಕುಡಿಯಬೇಕು. ಜೊತೆಗೆ ಆಗಾಗ ನಿಂಬೆ ರಸ ಜೊತೆಗೆ ಇತರ ಹಣ್ಣಿನ ರಸ, ಮಜ್ಜಿಗೆ, ಎಳನೀರು ಸೇವನೆ ಮಾಡುತ್ತಿರಬೇಕು

ಒಂದು ವೇಳೆ ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗಬೇಕಿದ್ದಲ್ಲಿ ಜನರು ಕೊಡೆ ಹಿಡಿದುಕೊಂಡು ಹೋಗಬೇಕು.
ಒದ್ದೆ ಬಟ್ಟೆಯನ್ನು ತಲೆಯ ಮೇಲೆ ಹಾಕಿಕೊಂಡು ಹೋಗುವುದು ಉತ್ತಮ ಎಂದು ತಿಳಿಸಿದೆ.

ಬಿಹಾರ, ರಾಜಸ್ತಾನ ಸೇರಿದಂತೆ ಅನೇಕ ಕಡೆ ಬಿಸಿಲ ತಾಪ 50 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಇನ್ನು ಕೆಲವು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿರುವುದರಿಂದ ಬಹಳ ಎಚ್ಚರಿಕೆ ವಹಿಸಬೇಕು ಎಂದು ಸಚಿವಾಲಯ ಹೇಳಿದೆ.

Leave a Reply