ಹೊಸದಿಲ್ಲಿ: ಭಾರತವನ್ನು ಸಂರಕ್ಷಿಸಲು ಜನಸಂಖ್ಯೆ ನಿಯಂತ್ರಿಸಲು ಕಾನೂನು ತರಬೇಕೆಂದು ಕೇಂದ್ರ ಸಚಿವ ಬಿಜೆಪಿ ಮುಖಂಡ ಗಿರಿರಾಜಸಿಂಗ್ ಹೇಳಿದ್ದಾರೆ. 2047ರಲ್ಲಿ 1947ರಂತೆ ದೇಶ ಇನ್ನೊಂದು ವಿಭಜನೆಗೆ ಸಾಕ್ಷಿಯಾಗಲಿದೆ ಎಂದು ಟ್ವೀಟ್ ಮಾಡಿದ ಬಳಿಕ ಜನಸಂಖ್ಯೆಯ ಕುರಿತು ಅವರು ವಿವರಣೆ ನೀಡಿದ್ದಾರೆ.

1947ರಲ್ಲಿ ಜನಸಂಖ್ಯೆ 33 ಕೋಟಿ ಆಗಿತ್ತು. 2018ರಲ್ಲಿ 135 ಕೋಟಿ ಆಗಿದೆ. ಹಿಂದೂಗಳ ಜನಸಂಖ್ಯೆ ಭಾರೀ ಕಡಿಮೆಯಾಗುತ್ತಿದೆ. ಜನಸಂಖ್ಯೆ ನಿಯಂತ್ರಿಸದಿದ್ದರೆ ಸಾಮಾಜಿಕ ಸಮತೋಲನ ತಪ್ಪಬಹುದು. ಅಭಿವೃದ್ಧಿ ಅಸಾಧ್ಯವಾಗಬಹುದು ಎಂದು ಗಿರಿರಾಜ ಸಿಂಗ್ ಹೇಳಿದರು. ಈ ವಿಷಯವನ್ನು ಚರ್ಚಿಸಿ ಪಾರ್ಲಿಮೆಂಟಿಗೆ ತಲುಪಿಸಬೇಕಾಗಿದೆ ಎಂದು ಆಗ್ರಹಿಸಿದರು.

ಹೆಚ್ಚಿನ ದೇಶಗಳು ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಮಾಡಿಟ್ಟುಕೊಂಡಿದೆ. ಭಾರತದಲ್ಲಿ ಇದು ಸಾಧ್ಯವಾಗದ್ದು ವೋಟು ಬ್ಯಾಂಕ್ ರಾಜಕೀಯದಿಂದಾಗಿದೆ. ಧರ್ಮದ ಹೆಸರಿನಲ್ಲಿ 1947ರಲ್ಲಿ ದೇಶ ವಿಭಜನೆಯಾಗಿತ್ತು. ಇದಕ್ಕೆ ಸಮಾನವಾದ ಪರಿಸ್ಥಿತಿ 2047ರಲ್ಲಿ ಸೃಷಿಯಾಗಲಿದೆ.ಭಾರತದಲ್ಲಿ ಮುಂದಿನ 72 ವರ್ಷಗಳಲ್ಲಿ ಜನಸಂಖ್ಯಾ ಸ್ಫೋಟ ನಡೆಯಲಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಜನಸಂಖ್ಯೆ ನಿಯಂತ್ರಣ ಅನಿವಾರ್ಯವೆಂದು ಸಿಂಗ್ ಹೇಳೀದರು.

Leave a Reply