ಹೊಸದಿಲ್ಲಿ: ಮಾಲಿ ದ್ವೀಪದ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿವಾದಿತ ಟ್ವೀಟ್ ಮಾಡಿದ್ದು, ಚುನಾವಣೆಯಲ್ಲಿ ಅಕ್ರಮ ನಡೆಯುವುದಾದರೆ ಭಾರತ ಆದೇಶಕ್ಕೆ ಆಕ್ರಮಣ ನಡೆಸಬೇಕೆಂದು ಹೇಳಿದ್ದಾರೆ. ಮುಂದಿನ ತಿಂಗಳು ಮಾಲಿ ದ್ವೀಪದಲ್ಲಿ ಚುನಾವಣೆ ನಡೆಯಲಿದ್ದು, ಸುಬ್ರಮಣಿಯನ್ ಸ್ವಾಮಿಯ ಟ್ವೀಟ ಉಭಯ ದೇಶಗಳ ಸಂಬಂಧದಲ್ಲಿ ಬಿರುಕು ಸೃಷ್ಟಿಸಲು ಕಾರಣವಾಗಿದೆ.

ಟ್ವೀಟ್‍ನ ಹಿನ್ನೆಲೆಯಲ್ಲಿ ಭಾರತದ ಹೈಕಮಿಶನರ್‍ರನ್ನು ಕರೆಯಿಸಿ ಮಾಲಿ ಸರಕಾರ ಆತಂಕ ವ್ಯಕ್ತಪಡಿಸಿದೆ. ಆದರೆ, ಇಂತಹ ವರದಿಗಳಿಗೆ ಮಾಲಿ ಸರಕಾರ ಅಧಿಕೃತವಾಗಿ ದೃಢೀಕರಿಸಿಲ್ಲ. ಮಾಲಿದ್ವೀಪದ ಭಾರತೀಯರನ್ನು ರಕ್ಷಿಸುವುದಕ್ಕಾಗಿ ಸರಕಾರ ಮಧ್ಯಪ್ರವೇಶಿಸಬೇಕೆಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.


ಇದೇ ವೇಳೆ ಸ್ವಾಮಿ ಟ್ವೀಟ್‍ಗೆ ಸಂಬಂಧಿಸಿ ಈಗ ಬಹಿರಂಗ ಹೇಳಿಕೆಯನ್ನು ಈಗ ನೀಡಲಾಗದು ಎಂದು ಕೇಂದ್ರ ಸರಕಾರ ನಿಲುವು ವ್ಯಕ್ತಪಡಿಸಿದೆ. ಸ್ವಾಮಿಯ ಅಭಿಪ್ರಾಯದಿಂದ ಗರಿಷ್ಠ ಅಂತವರನ್ನು ಪಾಲಿಸಲು ಕೇಂದ್ರ ಸರಕಾಯ ಯತ್ನಿಸುತ್ತಿದೆ. ಮಾಲಿದ್ವೀಪದ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ ಚುನಾವಣೆಯಲ್ಲಿ ಅಕ್ರಮ ನಡೆಯಲು ಸಾಧ್ಯವಿದೆ ಎಂದು ಹೇಳಿದ ಬಳಿಕ ದ್ವೀಪ ರಾಷ್ಟ್ರದ ಹೊಸವಿವಾದ ಸೃಷ್ಟಿಯಾಗಿದೆ.

Leave a Reply