ಗಾಲೆ : ಶ್ರೀಲಂಕಾ ನಾಯಕಿ ಚಮರಿ ಜಯನಗನಿ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಪ್ರವಾಸಿ ಭಾರತದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಜಯ ಗಳಿಸದರೂ, ಭಾರತದ ಮಹಿಳಾ ಕ್ರಿಕೆಟ್ ತಂಡ ಉಳಿದ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿದ ಕಾರಣ ಮೂರು ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಲ್ಲಿ ಕೈವಶ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್ 125 ರನ್ ಗಳ ಅಜೇಯ ಶತಕ ಭರಿಸಿದ್ದರೂ ಕೊನೆಯ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. 143 ಎಸತದಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಮಿಥಾಲಿ ಬಾರಿಸಿದ್ದರು. ಮಿಥಾಲಿ ರಾಜ್ ರವರು ತನ್ನ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಅಜೇಯ 125 ರನ್ ಗಳಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಶ್ರೀಲಂಕಾ ತಂಡಕ್ಕೆ 253 ರನ್ ಗುರಿ ನೀಡಿತ್ತು.

Leave a Reply