ಸಾಂದರ್ಭಿಕ ಚಿತ್ರ

ತಮಿಳ್ನಾಡು: ಅಮೆರಿಕನ್ ಪ್ರಜೆ ಮತ್ತು ಭಾರತದ ಪತಿರಾಯ ಪತ್ನಿಯನ್ನು ತಮಿಳ್ನಾಡಿನ ರಸ್ತೆ ಬದಿಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ತಮಿಳ್ನಾಡಿನ ವೆಲ್ಲಗೇಟ್ ಎಂಬಲ್ಲಿ ನಡೆದಿದೆ. ಸ್ಥಳೀಯರು ವಿದೇಶಿ ಮಹಿಳೆಯೊಬ್ಬರು ಅತ್ತಿತ್ತ ಅಲೆದಾಡುತ್ತಿರುವುದು ಕಂಡು ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಮಹಿಳೆ ಸ್ಥಳೀಯ ಆಟೋ ಚಾಲಕರೊಂದಿಗೆ ತನ್ನ ದುರಂತ ಕತೆಯನ್ನು ವಿವರಿಸಿದ್ದು, ಚೆನ್ನೈನ ವೆಲಚಚೇರಿಯಲ್ಲಿ ಮಹಿಳೆ ಪತಿಯೊಂದಿಗೆ ನೆಲೆಸಿದ್ದರು. ಪತಿ ಪತ್ನಿಯರ ನಡುವೆ ಯಾವುದೋ ವಿಚಾರದಲ್ಲಿ ಜಗಳವಾಗಿದ ನಂತರ ಪತಿ ಮಹಿಳೆಯನ್ನು ವೆಲ್ಲಗೇಟ್ ಎಂಬಲ್ಲಿ ಕಾರಿನಲ್ಲಿ ಕರೆತಂದು ರಸ್ತೆ ಬದಿ ಬಿಟ್ಟು ಹೋಗಿದ್ದಾನೆ..

ನಂತರ ಅಲ್ಲಿಗಾಗಮಿಸಿದ ಪೊಲೀಸರು ಸರಕಾರಿ ಮಹಿಳೆಯರ ಅಭಯ ಕೇಂದ್ರಕ್ಕೆ ವಿದೇಶಿ ಮಹಿಳೆಯನ್ನು ಕಳುಹಿಸಿದ್ದಾರೆ. ದಾರಿಯಲ್ಲಿ ಬದಿ ಬಿಟ್ಟು ಹೋದ ಪತಿರಾಯ ಘಟನೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದು ಎಲ್ಲವನ್ನೂ ತನ್ನ ವಕೀಲರು ನೋಡಿಕೊಳ್ಳುತ್ತಾರೆ ಎಂದಿದ್ದಾನೆಂದು ಪಿಟಿಐ ವರದಿಮಾಡಿದೆ.

Leave a Reply