ದುಬೈ: ಮಾತಿನ ಚಕಮಕಿಯಲ್ಲಿ ಕೇರಳದ ವ್ಯಕ್ತಿಯೊಬ್ಬರು ಪಾಕಿಸ್ತಾನದ ವ್ಯಕ್ತಿಯ ಇರಿತಕ್ಕೊಳಗಾಗಿ ಕೊಲೆಯಾಗಿದ್ದಾರೆ. ಪಾರ್ಕೊ ಹೈಪರ್ ಮಾರ್ಕೆಟ್ ಆಂಡ್ ರೆಸಾರ್ಟ್ ಮ್ಯಾನೇಜರ್ ಆಗಿರುವ ಕೇರಳದ ಪುನೂರ್ ಪುಕ್ಕೋಟ್ ವಿ.ಕೆ ಅಬೂ ಎಂಬವರ ಪುತ್ರ ಅಬ್ದುಲ್ ರಶೀದ್(42) ಕೊಲೆಯಾದ ವ್ಯಕ್ತಿಯಾಗಿದ್ದು, ಸಹೋದ್ಯೋಗಿ ಪಾಕಿಸ್ತಾನಿ ವ್ಯಕ್ತಿ ರಶೀದ್‍ರನ್ನು ಇರಿದು ಹತ್ಯೆ ಎಸಗಿದ್ದಾನೆ.

ರವಿವಾರ ರಾತ್ರೆ ರೂಮಿನಲ್ಲಿ ಈ ಘಟನೆ ನಡೆದಿದೆ. ದುಬೈ ಇನ್‍ವೆಸ್ಟ್‍ಮೆಂಟ್ ಪಾರ್ಕಿನ ಸೂಪರ್ ಮಾರ್ಕೆಟಿಗೆ ತಾಗಿ ಕೊಂಡಿರುವ ಬಿಲ್ಡಿಂಗಿನಲ್ಲಿ ರಷೀದ್, ಕೊಲೆ ಆರೋಪಿ ಪಾಕಿಸ್ತಾನದ ವ್ಯಕ್ತಿ ಜೊತೆ ವಾಸಿಸುತ್ತಿದ್ದರು.

Leave a Reply