18 ವರ್ಷಗಳ ಕಾಲ ಪಾಕಿಸ್ತಾನದ ಜೈಲಿಲ್ಲಿ ಬಂಧಿಯಾಗಿದ್ದ ಭಾರತೀಯ ಮಹಿಳೆಯೊಬ್ಬರು ಇದೀಗ ತನ್ನ ದೇಶಕ್ಕೆ ಮರಳಿದ್ದಾರೆ. 65 ವರ್ಷದ ಹಸೀನಾ ಬೇಗಂ ತನ್ನ ಕೆಲವು ಸಂಬಂಧಿಕರನ್ನು ಭೇಟಿ ಮಾಡಲು 2002 ರಲ್ಲಿ ಲಾಹೋರ್‌ಗೆ ಹೋಗಿದ್ದರು. ಈ ಸಮಯದಲ್ಲಿ, ಅವರು ತಮ್ಮ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ನಂತರ ಪಾಕಿಸ್ತಾನದ ಅಧಿಕಾರಿಗಳು ಅವರನ್ನು ಬಂಧಿಸಿ ಜೈಲಿಗೆ ಹಾಕಿದರು. ತಾನು ನಿರಪರಾಧಿ ಮತ್ತು ತನ್ನನ್ನು ಬಿಡುಗಡೆ ಮಾಡಬೇಕೆಂದು ಅವರು ಪಾಕಿಸ್ತಾನ ಆಡಳಿತಕ್ಕೆ ಹೇಳುತ್ತಲೇ ಇದ್ದರು.

india-vs-pak

ಕೊನೆಗೆ ಹಸೀನಾ ಪ್ರಕರಣದ ತನಿಖೆ ನಡೆಸುವಂತೆ ಪಾಕಿಸ್ತಾನದ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ನಂತರ ಪಾಕಿಸ್ತಾನ ಪೊಲೀಸರು ಭಾರತೀಯ ಪೊಲೀಸರನ್ನು ಸಂಪರ್ಕಿಸಿ ಹಸೀನಾ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾ ಔರಂಗಾಬಾದ್ ನ ಸಿಟಿ ಚೌಕ್ ಪೊಲೀಸ್ ಠಾಣೆ ಅಡಿಯಲ್ಲಿ ಹಸೀನಾ ಹೆಸರಿನಲ್ಲಿ ಮನೆ ನೋಂದಾಯಿಸಲಾಗಿದೆ ಎಂದು ಪಾಕಿಸ್ತಾನಕ್ಕೆ ಮಾಹಿತಿ ಕಳುಹಿಸಲಾಗಿದೆ. ಈ ರೀತಿಯಾಗಿ ಹಸೀನಾ ಭಾರತೀಯ ಪ್ರಜೆ ಎಂದು ದೃಢ ಪಟ್ಟಿದ್ದು, ಬಳಿಕ ಅವರನ್ನು ಬಿಡುಗಡೆ ಗೊಳಿಸಲಾಯಿತು.

police

ಮಾಧ್ಯಮ ವರದಿಗಳ ಪ್ರಕಾರ, ಜನವರಿ 26 ರಂದು ಹಸೀನಾ ತಾಯ್ನಾಡಿಗೆ ಮರಳಿದ್ದಾರೆ. ತನ್ನನ್ನು ಬಲವಂತವಾಗಿ ಪಾಕಿಸ್ತಾನದಲ್ಲಿ ಬಂಧಿಸಲಾಯಿತು, ಪಾಕಿಸ್ತಾನದ ಜೈಲಲ್ಲಿ ಕಳೆದ ಹಲವು ವರ್ಷಗಳಲ್ಲಿ ಬಹಳಷ್ಟು ನೋವು ಅನುಭವಿಸಿದ್ದೇನೆ ಎಂದು ಹಸೀನಾ ಹೇಳಿದ್ದಾರೆ. ತನಗೆ ನೀಡಿದ ಸಹಾಯ ಸಹಕಾರಕ್ಕಾಗಿ ಸರ್ಕಾರ ಮತ್ತು ಔರಂಗಾಬಾದ್ ಪೊಲೀಸರಿಗೆ ಹಸೀನಾ ಧನ್ಯವಾದ ಅರ್ಪಿಸಿದರು.

Leave a Reply