ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು ಕೇಂದ್ರ ಪ್ರತ್ಯಕ್ಷ ತೆರಿಗೆ ವಿಭಾಗ ಲೆಕ್ಕವನ್ನು ಬಹಿರಂಗಪಡಿಸಿದೆ. ಪ್ರತಿವರ್ಷ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆದಾಯ ಇರುವವರಲ್ಲಿ ಹೆಚ್ಚಳವಾಗಿದ್ದು 2017-18ರಲ್ಲಿ ತೆರಿಗೆದಾಯಕರಲ್ಲಿ 1, 40. 139 ಜನರು ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ವರಮಾನ ತೋರಿಸಿದ್ದಾರೆ.
2014-15 ಆರ್ಥಿಕ ವರ್ಷದಲ್ಲಿ 88. 649 ಮಂದಿ ಮಾತ್ರ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ವರಮಾನವನ್ನು ಹೊಂದಿದವರಿದ್ದರು. ಕಾರ್ಪೊರೇಟ್‍ಗಳು, ವ್ಯಕ್ತಿಗಳ ಸಂಸ್ಥೆಗಳ ಲೆಕ್ಕವಿದು. ಇವರಲ್ಲಿ ಶೇ. 68ರಷ್ಟು ಹೆಚ್ಚಳ ಸಂಭವಿಸಿದೆ. 2014-15 ಆರ್ಥಿಕ ವರ್ಷದಲ್ಲಿ 48.416 ಮಂದಿ ಒಂದು ಕೋಟಿಗಿಂತ ಹೆಚ್ಚಿನ ವರಮಾನವನ್ನು ಹೊಂದಿದವರಿದ್ದರು. ಇದು 2017-18ರ ಆರ್ಥಿಕ ವರ್ಷದಲ್ಲಿ 83,334 ಆಗಿ ವೃದ್ದಿಯಾಗಿದೆ.
ಆದಾಯದ ಲೆಕ್ಕವನ್ನು ತೋರಿಸುವುದು ಕಡ್ಡಾಯವಾದ ಬಳಿಕ ಇವೆಲ್ಲ ಬೆಳವಣಿಗೆ ನಡೆದಿವೆ ಎಂದು ಪ್ರತ್ಯಕ್ಷ ತೆರಿಗೆ ನಿರ್ದೇಶಕ ಸುಶೀಲ್ ಚಂದ್ರ ಹೇಳಿದ್ದಾರೆ. ಇದಕ್ಕಾಗಿ ಕಾನೂನು ರಚನೆ, ಜಾಗೃತಿ, ಎಂಫೋಸ್ ಮೆಂಟ್ ಪ್ರಕ್ರಿಯೆಗಳನ್ನು ಜಾರಿಗೊಳಿಸಲಾಗಿತ್ತು ಎಂದು ಅವರು ಹೇಳಿದರು.
ಇದೇ ವೇಳೆ ಆದಾಯ ರಿಟರ್ನ್ ಸಲ್ಲಿಕೆ ಮಾಡುವವರ ಸಂಖ್ಯೆಯಲ್ಲಿಯೂ ಹೆಚ್ಚಳ ವಾಗಿದೆ. 2013-14 ಆರ್ಥಿಕ ವರ್ಷದಲ್ಲಿ 3, 74 ಮಂದಿ ತೆರಿಗೆ ರಿಟರ್ನ್ ಮಾಡುವವರಿದ್ದರು. 2017-18ಕ್ಕೆ ತಲುಪಿದಾಗ ಇದು 6. 85 ಕೋಟಿಯಾಗಿ ಹೆಚ್ಚಿತರು. ಶೇ. 80ರಷ್ಟು ತೆರಿಗೆ ರಿಟರ್ನ್ ಆಗಿದೆ.