ಇದುನಮ್ಮಊರು: ಮುಹಮ್ಮದ್ ರಫಿ ಯವರಂತಹ ಗಾಯಕರನ್ನು ಅನುಕರಿಸುವುದು ಅಷ್ಟೊಂದು ಸುಲಭವಲ್ಲ. ಹಲವಾರು ಮಂದಿ ಆರ್ಕೆಸ್ಟ್ರಾ ಗಳಲ್ಲಿ ರಫಿಯರಂತೆ ಹಾಡಲು ಪ್ರಯತ್ನಿಸುತ್ತಾರೆ. ಸೋನು ನಿಗಮ್ ಕೂಡ ರಫಿಯವರ ಹಾಡನ್ನು ಸುಂದರವಾಗಿ ಅವರದೇ ಶೈಲಿಯಲ್ಲಿ ಹಾಡಲು ಪ್ರಯತ್ನಿಸುತ್ತಾರೆ. ಆದರೆ ಕೇರಳದ ಸೌರವ್ ಕಿಶನ್ ಭಾರತದ ಹೊಸ ಮುಹಮ್ಮದ್ ರಫಿ ಎಂದು ಸಂಚಲನ ಮೂಡಿಸಿದ್ದಾರೆ. ಅವರ ಹಾಡನ್ನು ಕೇಳಿ ಖ್ಯಾತ ಗಾಯಕರೂ ಟ್ವೀಟ್ ಮಾಡಿ ಹೊಗಳಿದ್ದಾರೆ.

ವಿಡಿಯೋ ನೋಡಿ

ಮುಹಮ್ಮದ್ ರಫಿ ಕಿರು ಪರಿಚಯ

ಮೊಹಮ್ಮದ್ ರಫಿ (ಹಿಂದಿ:मोहम्मद रफ़ी ಉರ್ದು: محمد رفیعಡಿಸೆಂಬರ್ 24,1924-ಜುಲೈ 31,1980),ಇವರೊಬ್ಬ ಭಾರತೀಯ ಹಿನ್ನಲೆ ಗಾಯಕ; ಇವರು ತಮ್ಮ ವೃತ್ತಿಜೀವನವನ್ನು ನಾಲ್ಕು ದಶಕಗಳ ಕಾಲ ನಡೆಸಿದ್ದಾರೆ. ಅವರು 5 ನ್ಯಾಶನಲ್ ಅವಾರ್ಡ್ಸ್ ರಾಷ್ಟ್ರೀಯ ಪುರಸ್ಕಾರ ಮತ್ತು 6 ಫಿಲ್ಮ್ ಫೇರ್ ಅವಾರ್ಡ್ಸ್ ಗೆ ಪಾತ್ರರಾಗಿದ್ದಾರೆ. ಅವರು 1967 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಪಡೆದರು.

ತಮ್ಮ 40 ವರ್ಷಗಳ ವೃತ್ತಿ ಜೀವನದಲ್ಲಿ ರಫಿ ಸುಮಾರು 26,000 ಚಲನಚಿತ್ರಗೀತೆಗಳಿಗೆ ಕಂಠದಾನ ಮಾಡಿದ್ದಾರೆ. ಅವರ ಹಾಡುಗಳಲ್ಲಿ ಶಾಸ್ತ್ರೀಯದಿಂದ ಹಿಡಿದು ದೇಶಭಕ್ತಿ ಗೀತೆಗಳ ವರೆಗೆ ವಿಸ್ತರಿಸಿವೆ.ಕವಾಲಿಗಳಿಂದ ಹಿಡಿದು ಘಜಲ್ಸ್ ಮತ್ತು ಭಜನ್ಸ್ ಮತ್ತು ಮೃದು ಮಧುರ ಪ್ರೇಮ ಗೀತೆಗಳು ಅವರ ಪ್ರಮುಖ ಕೊಡುಗೆಗಳಾಗಿವೆ. ಅವರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಅತ್ಯುತ್ತಮ ಹಿಡಿತ ಹೊಂದಿದ್ದರಿಂದ ಅವರಿಗೆ ಈ ವಿಭಿನ್ನತೆ ಸಾಧನೆ ಸಾಧ್ಯವಾಗಿದೆ. ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಅದರಲ್ಲಿ ಹಿಂದಿ, ಕೊಂಕಣಿ, ಉರ್ದು, ಭೋಜಪುರಿ, ಒಡಿಯಾ, ಪಂಜಾಬಿ,ಬಂಗಾಳಿ, ಮರಾಠಿ, ಸಿಂಧಿ, ಕನ್ನಡ, ಗುಜರಾತಿ,ತೆಲುಗು, ಮಾಘಿ, ಮೈಥಿಲಿ ಮತ್ತು ಅಸ್ಸಾಮಿ ಗಳಲ್ಲಿಯೂ ಕಂಠದಾನ ಮಾಡಿದ ಖ್ಯಾತಿ ಅವರದು. ಅವರು ಕೆಲವು ಇಂಗ್ಲೀಷ್, ಪರ್ಸಿಯನ್, ಸ್ಪ್ಯಾನಿಶ್ ಮತ್ತು ಡಚ್ ಹಾಡುಗಳನ್ನೂ ಧ್ವನಿ ಮುದ್ರಣ ಮಾಡಿದ್ದಾರೆ.

Leave a Reply