ಇಂದೋರ್: ಇಲ್ಲಿ ನಡೆಯುವ ಆತ್ಮಹತ್ಯೆಗಳ ಕುರಿತು ಆಶ್ಚರ್ಯಕಾರಿ ಅಂಕಿಸಂಖ್ಯೆ ಬಹಿರಂಗವಾಗಿದೆ. ಈ ವರ್ಷ 9 ತಿಂಗಳಲ್ಲಿ 200ಕ್ಕೂ ಹೆಚ್ಚು ಜನರು ನಗರದಲ್ಲಿ ಸ್ವ ಇಚ್ಛೆಯಿಂದ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಚಿಂತೆಯ ವಿಷಯವೆಂದರೆ ತಂದೆ ತಾಯಿಯಕನಸ್ಸನ್ನು ಸಾಕಾರ ಮಾಡಬೇಕಾದ ಯುವಕರೇ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿದೆ.
ಕಳೆದ ಐದುವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ 838 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದಲ್ಲೇ ಮಧ್ಯಪ್ರದೇಶಕ್ಕೆ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ನಾಲ್ಕನೆ ಸ್ಥಾನ ಇದೆ. ಅತಿಹೆಚ್ಚು ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ನಡೆದಿದೆ. ಈ ವರ್ಷ ಇಂದೋರ್‍ನಲ್ಲಿ ಹತ್ತು ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ಮತ್ತು ಹನ್ನೆರಡು ವಿದ್ಯಾರ್ಥಿಗಳು ಕುಟುಂಬದ ಮಾನಸಿಕ ಕಿರುಕುಳದಿಂದ ದುಃಖಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಮಕ್ಕಳಾಗಿದ್ದಾರೆ.
ಅತಿಹೆಚ್ಚು ಯುವಕರು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿದ 200ಮಂದಿಯಲ್ಲಿ ಶೇ.ರಷ್ಟು ಮಂದಿ ಯುವಕರು. ಇವರಿಗೆ ಸಾಯಲಿಕ್ಕಿದ್ದ ಕಾರಣಗಳು ವಿಫಲ ಪ್ರೇಮ, ನಿರುದ್ಯೋಗ, ಕುಟುಂಬದ ಒತ್ತಡ, ವ್ಯವಹಾರದಲ್ಲ ವೈಫಲ್ಯ, ಸಾಲ ಇತ್ಯಾದಿಗಳಾಗಿವೆ. ಇವರಲ್ಲಿ ಐವರು ನಿರೋದ್ಯಗಕ್ಕಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿದವರಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳು ಸೇರಿದ್ದಾರೆ. ಅವರು ಬೇರೆ, ಬೇರೆ ಕಾರಣಗಳಿಗಾಗಿ ತನ್ನ ಜೀವ ತೆತ್ತಿದ್ದಾರೆ.