* ಇಸ್ತ್ರಿ ಹಾಕುವ ಮೊದಲು ಯಾವ ರೀತಿಯ ಬಟ್ಟೆಗೆ ಇಸ್ತ್ರಿ ಹಾಕುವುದೆಂದು ತಿಳಿದುಕೊಂಡು, ಅದಕ್ಕೆ ಕ್ರಮೀಕರಿಸಿ ಇಸ್ತ್ರಿ ಆರಂಭಿಸಿ.
* ಶರ್ಟುಗಳಿಗೆ ಇಸ್ತ್ರಿ ಹಾಕಲಾರಂಭಿಸುವಾಗ ಕಾಲರ್‍ನಿಂದ ಆರಂಭಿಸಿ.
* ಪ್ಯಾಂಟುಗಳಿಗೆ ಇಸ್ತ್ರಿ ಹಾಕುವಾಗ ಸೊಂಟದ ಭಾಗದಿಂದ ಆರಂಭಿಸಿ ಕೆಳಕ್ಕೆ ಇಸ್ತ್ರಿ ಹಾಕಿ.
* ಇಸ್ತ್ರಿ ಪೆಟ್ಟಿಗೆಯ ಕೆಳಭಾಗದಲ್ಲಿ ಏನಾದರೂ ಅಂಟಿ ಹಿಡಿದದ್ದು ಗೋಚರ ವಾದರೆ ಆ ಸ್ಥಳಕ್ಕೆ, ಸ್ವಲ್ಪ ಉಪ್ಪು ಸವರಿ ಒಂದು ತುಂಡು ಪೇಪರ್ ಅಥವಾ ವಸ್ತ್ರದಿಂದ ಒರೆಸಿ.

* ಇಸ್ತ್ರಿ ಹಾಕಬೇಕಾದ ಬಟ್ಟೆಗಳನ್ನು ಒಮ್ಮೆಲೇ ಹಾಕಿಡಿ. ವಿದ್ಯುತ್ ಕಡಿಮೆ ಸಾಕಾಗುತ್ತದೆ.
* ವಸ್ತ್ರಗಳನ್ನು ಸಾಧ್ಯವಾದಷ್ಟು ಅಡಿಮೇಲು ಮಾಡಿ ಇಸ್ತ್ರಿ ಹಾಕುವುದು ಒಳ್ಳೆದು.
* ಇಸ್ತ್ರಿ ಪೆಟ್ಟಿಗೆಯನ್ನು ಬಿಸಿಯಾಗಲು ಇರಿಸಿ ಬೇರೆ ಕೆಲಸಕ್ಕೆ ಹೋಗಬೇಡಿ.
* ಇಸ್ತ್ರಿ ಹಾಕುವುದಕ್ಕಿಂತ ಮೊದಲು ಬಟ್ಟೆ ಒದ್ದೆ ಮಾಡಿ ಅದನ್ನು ಒರೆಸುವುದು ಉತ್ತಮ.
* ಎಂಬ್ರಾಯಿಡರಿ, ಲೇಸ್, ಸಾಟಿನ್, ಬಟ್ಟೆಗಳಿಗೆ ಅಡಿಭಾಗದಲ್ಲಿ ಇಸ್ತ್ರಿ ಹಾಕಿ.

LEAVE A REPLY

Please enter your comment!
Please enter your name here