1. ಮೋಟು ಗೋಡೆ ಮೇಲೆ ದೀಪ ಉರೀತಿದೆ
2. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ
3. ಗುಡುಗು ಗುಡಗಿದರೆ ಸಾವಿರ ನಯನಗಳು ಅರಳುವುದು
4. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬಾ ಮರಿಗಳು
5. ಗಿಡ ಕೊಡಲಾರದು, ಮರ ಬೆಳಸಲಾರದು ಅದಿಲ್ಲದೆ ಊಟ ಸೇರಲಾರದು

6. ಒಬ್ಬನನ್ನು ಹಿಡಿದರೆ ಎಲ್ಲರ ಮರ್ಜಿಯು ಗೊತ್ತಾಗುತ್ತದೆ
7. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು
8. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ
9. ಬಿಳಿ ಕುದುರೆಗೆ ಹಸಿರು ಬಾಲ
10. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ

1.ಮೂಗುಬೊಟ್ಟು 2. ಬದನೇಕಾಯಿ 3. ನವಿಲು 4.ಕೋಳಿ 5. ಉಪ್ಪು 6, ಅನ್ನದ ಅಗುಳು 7. ಸೀತಾಫಲ 8. ಕಣ್ಣು 9. ಮೂಲಂಗಿ 10. ಕುಂಕುಮ

LEAVE A REPLY

Please enter your comment!
Please enter your name here