Photo credit : indiatoda

ಪತ್ನಿಯರು ತಮ್ಮ ಗಂಡನ ಆಯುಷ್ಯ ಮತ್ತು ಲೌಕಿಕ ಸಮೃದ್ಧಿಗಾಗಿ ಕರ್ವಚೌತ್ ಉಪವಾಸ ವೃತವನ್ನು ಆಚರಿಸುತ್ತಾರೆ.

ದೆಹಲಿಯ ಸಾಫ್ದಾರ್ ಜಂಗ್ ಆಸ್ಪತ್ರೆಯಲ್ಲಿ 51 ವರ್ಷದ ವ್ಯಕ್ತಿ ತನ್ನ ಅನಾರೋಗ್ಯ ಪೀಡಿತ ಹೆಂಡತಿಯ ಜೀವ ಉಳಿಸುವುದಕ್ಕಾಗಿ ಕರ್ವಚೌತ್ ಪ್ರಯುಕ್ತ ತನ್ನ ಕಿಡ್ನಿ ದಾನ ಮಾಡಿದ್ದಾರೆ.ಸೋನಿಪತ್ ಮೂಲದ ದಂಪತಿ ಈಗ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅವರು ಶನಿವಾರದಂದು ಮನೆಯಲ್ಲಿ ಕಾರ್ವಾ ಚೌತ್ ವೃತವನ್ನು ಒಟ್ಟಾಗಿ ಆಚರಿಸಬಹುದು ಎಂದು ಸಂತುಷ್ಟರಾಗಿದ್ದಾರೆ.

ಭಾರತದಲ್ಲಿ, ಮೂತ್ರಪಿಂಡ ಕಸಿಗೆ 80-85 ಶೇ. ದಾನಿಗಳು ಮಹಿಳೆಯರಾಗಿದ್ದಾರೆ ಮತ್ತು 80-85 ಶೇ. ಪಡೆದವರು ಪುರುಷರಾಗಿದ್ದಾರೆ ಎಂದು ಮತ್ತು ಮೂತ್ರಪಿಂಡ ಕಸಿ ಇಲಾಖೆಯ ಮುಖ್ಯಸ್ಥ ಡಾ.ಅನೂಪ್ ಕುಮಾರ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

“ನನ್ನ ಹೆಂಡತಿ ಆಶಾ ಮೂತ್ರಪಿಂಡದ ಕಾಯಿಲೆಯಿಂದ ಅನಾರೋಗ್ಯದ ಜೀವನವನ್ನು ನಡೆಸುತ್ತಿದ್ದಾಳೆ, ಕಸಿ ಮಾಡಿದ ನಂತರ ಅವಳು ಚೇತರಿಸಿಕೊಂಡಿದ್ದು, ಈಗ ಅವಳ ಕೆಲಸವನ್ನು ಅವಳೇ ಮಾಡುತ್ತಾಳೆ. ಮುಖ್ಯವಾಗಿ ಈಗ ಅವಳಿಗೆ ನೋವು ಇಲ್ಲ ಎಂಬುದು ಸಮಾಧಾನ.

ನನ್ನ ದೀರ್ಘ ಆಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ೩೦ ವರ್ಷಗಳಿಂದ ಪ್ರತಿ ಕಾರ್ವಾ ಚೌಥ್ಗೆ ಅವಳು ಪ್ರಾರ್ಥಿಸುತ್ತಾಳೆ,ಈಗ ಅವಳಿಗೆ ಉಡುಗೊರೆ ಕೊಡುವುದು ನನ್ನ ಕರ್ತವ್ಯ. ” ಪತಿ ರಾಕೇಶ್ ಶರ್ಮಾ ಹೇಳಿದ್ದಾರೆ.

ದಂಪತಿಗಳು ಸಮಾಜಕ್ಕೆ ಸುಂದರವಾದ ಸಂದೇಶ ನೀಡಿದ್ದಾರೆ, ರಾಕೇಶ್ ಅವರ ಹೆಂಡತಿ ಅಧಿಕ ರಕ್ತದೊತ್ತಡದಿಂದಾಗಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು.

ರಾಕೇಶ್ ತನ್ನ ಮೂತ್ರಪಿಂಡವನ್ನು ತನ್ನ ಹೆಂಡತಿಗೆ ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಹೆಚ್ಚಾಗಿ ಕುಟುಂಬದಲ್ಲಿ ಪುರುಷರು ಕಿಡ್ನಿ ದಾನ ಮಾಡಲು ಹಿಂದೇಟು ಹಾಕುತ್ತಾರೆ. ಇದೊಂದು ಮಾದರೀಯೋಗ್ಯ ದಂಪತಿಗಳಾಗಿದ್ದಾರೆ ಎಂದು ಡಾ.ಅನೂಪ್ ಕುಮಾರ್ ಹೇಳಿದ್ದಾರೆ.

Leave a Reply