Image : .mathrubhumi

ತಿರುವನಂತಪುರಂ: ಆಧುನೀಕರಣಕ್ಕಾಗಿ ಜನರು ತಮ್ಮ ಹಳೆಯ ಮನೆಯನ್ನು ನವೀಕರಿಸುತ್ತಾರೆ. ಆದರೆ ಕೇರಳದ ಈ ವೃದ್ಧ ದಂಪತಿಗಳು ತಮ್ಮ ಪೂರ್ವಜರ ಮನೆಯನ್ನು ಬಿಡಲು ಸಿದ್ಧರಿಲ್ಲ. 90 ವರ್ಷ ಹತ್ತಿರವಿರುವ ಸುಕುಮಾರನ್ ನಾಯರ್ ಮತ್ತು ಅವರ ಪತ್ನಿ 85 ವರ್ಷದ ಸರಸ್ವತಿ ತಮ್ಮ 125 ವರ್ಷದ ಮನೆಯಲ್ಲಿ ಸಂತೋಷದಿಂದ ವಾಸಿಸುತ್ತಿದ್ದಾರೆ.
ಪ್ರಾಚೀನ ವಸ್ತು ಶಿಲ್ಪದ ಶೈಲಿಯಲ್ಲಿ ಹಿಂದೆ ನಿರ್ಮಿಸಲಾಗಿರುವ ಈ ಸುಂದರ ಮನೆಯು ದೃಶ್ಯ ನಿಜಕ್ಕೂ ವಿಶಿಷ್ಟವಾಗಿದೆ. ಈ ಮನೆ ಎಲೆಂಕಂ ದೇವಸ್ಥಾನದ ಬಳಿ ಇದೆ. ಮನೆಯ ಮೇಲ್ಚಾವಣಿಯಲ್ಲಿ ಮರದ ರಚನೆಯು ಮಲಯಾಳಂ ಕ್ಯಾಲೆಂಡರ್ 1086 ರ ದಿನಾಂಕವನ್ನು ಸೂಚಿಸಲಾಗಿದೆ.

ತೇಗ ಮತ್ತು ಭಾರತೀಯ ಲಾರೆಲ್ ಮರವನ್ನು ಮುಖ್ಯವಾಗಿ ಮನೆ ನಿರ್ಮಾಣ ಮಾಡಲು ಹಿಂದೆ ಬಳಸಲಾಗುತ್ತಿತ್ತು. ಮರದಿಂದ ನಿರ್ಮಿಸಲಾದ ಕೊಠಡಿಗಳು ಪೂರ್ವಜರ ಮನೆಯ ಪ್ರಮುಖ ಆಕರ್ಷಣೆಯಾಗಿದೆ. ಮಾತ್ರವಲ್ಲ ಮನೆಯ ಕೀಲಿ ಕೈ ಕೂಡ ಮರದಿಂದ ರಚಿಸಲಾಗಿದ್ದು, ತುಂಬಾ ಆಕರ್ಷಕವಾಗಿದೆ. ಸುಕುಮಾರನ್ ನಾಯರ್ ಅವರ ತಂದೆ, ಅಜ್ಜ ಮತ್ತು ಮೊಮ್ಮಕ್ಕಳು ಸೇರಿದಂತೆ ಮೂರು ತಲೆಮಾರುಗಳ ಫೋಟೋಗಳನ್ನು ಮನೆಯ ಗೋಡೆಗಳಲ್ಲಿ ಪ್ರದರ್ಶಿಸಲಾಗಿದೆ.

ಈ ಇಳಿ ವಯಸ್ಸಿನಲ್ಲೂ ಸುಕುಮಾರನ್ ನಾಯರ್ ದಿನ ಪತ್ರಿಕೆಯನ್ನು ಓದುತ್ತಾರೆ.

“ಅದೃಷ್ಟವಶಾತ್, ನಮಗೆ ಯಾವುದೇ ತೀವ್ರ ಕಾಯಿಲೆ ಇಲ್ಲ. ಪರಿಸರ ಸ್ನೇಹಿ ಮನೆಯಲ್ಲಿ ವಾಸಿಸುತ್ತಿರುವುದರಿಂದ ನಾವು ಆರೋಗ್ಯವಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ ” ಎಂದು ಸುಕುಮಾರನ್ ನಾಯರ್ ಹೇಳಿದರು. ವಯಸ್ಸಾದ ದಂಪತಿಗಳು ಸಾಯುವವರೆಗೂ ತಮ್ಮ ನೆಚ್ಚಿನ ಮನೆಯಲ್ಲಿ ವಾಸಿಸುವ ತುಡಿತವನ್ನು ವ್ಯಕ್ತಪಡಿಸಿದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಇವರೆಲ್ಲರೂ ಪ್ರತ್ಯೇಕ ಮನೆಗಳಲ್ಲಿ ನೆಲೆಸಿದ್ದಾರೆ.

“ನಮ್ಮ ಮಕ್ಕಳು ನಮ್ಮನ್ನು ಅವರ ಮನೆಗಳಿಗೆ ಆಹ್ವಾನಿಸುತ್ತಿದ್ದರು. ಆದರೆ ನಮ್ಮ ಪುಟ್ಟ ಮನೆಯಲ್ಲಿ ತಂಪಾದ ವಾತಾವರಣವನ್ನು ಅವರ ದೊಡ್ಡ ಕಾಂಕ್ರೀಟ್ ಮನೆಗಳಲ್ಲಿ ನಾವು ಕಂಡುಕೊಳ್ಳಲಿಲ್ಲ ”ಎಂದು ದಂಪತಿಗಳು ಹೇಳಿದರು. ಬೇಸಿಗೆಯ ಸೆಖೆಯಲ್ಲೂ ಅವರ ಮನೆ ತುಂಬಾ ತಂಪಾಗಿರುತ್ತದೆ. ಈ ಹಿಂದೆ ತೆಂಗಿನ ಮರದ ಎಲೆಯಿಂದ ಮೇಲ್ಚಾವಣಿ ಮಾಡಲಾಗಿತ್ತು. ಐದು ವರ್ಷಗಳ ಹಿಂದೆ ಅದನ್ನು ನವೀಕರಿಸುವಾಗ ಮಣ್ಣಿನ ಅಂಚಿನಿಂದ ರಚಿಸಲಾಗಿದೆ. ಕಾರ್ಮಿಕರ ಕೊರತೆಯಿಂದ ಹೀಗೆ ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ.

Leave a Reply