Image: kannada.mykhel

ಉಡುಪಿ: ಓಟ ಎಂದೊಡನೆ ಎಲ್ಲರ ಮನದಲ್ಲಿ ಬರುವ ಹೆಸರು ಉಸೇನ್ ಬೋಲ್ಟ್ ವಿಶ್ವದ ಅತ್ಯಂತ ವೇಗದ ಓಟಗಾರರೆನಿಸಿದ ಈತ, ದಾಖಲಿಸಿದ ದಾಖಲೆಗಳಿಗೆ ಲೆಕ್ಕವಿಲ್ಲ. ಪಡೆದ ಪದಕಗಳು ನೂರಾರು. ಉಸೈನ್ ಬೋಲ್ಟ್’ ಜಮೈಕ ದೇಶದ ಒಬ್ಬ ಓಟಗಾರ. 100 ಮೀಟರ್ ಓಟ ಹಾಗು 200 ಮೀಟರ್ ಓಟ ಸ್ಪರ್ಧೆಗಳಲ್ಲಿ ವಿಶ್ವ ಹಾಗು ಒಲಂಪಿಕ್ ದಾಖಲೆಗಳನ್ನು ಹೊಂದಿರುವಾತ. 2008ರ ಬೀಜಿಂಗ್ ಒಲಂಪಿಕ್ಸ್ ಅಲ್ಲಿ ಈ ಎರಡು ಸ್ಪರ್ಧೆಗಳನ್ನಲ್ಲದೆ, ಜಮೈಕದ ಇತರ ತಂಡಗಾರರೊಂದಿಗೆ 4 x 100 ಮೀಟರ್ ರಿಲೇ ಸ್ಪರ್ಧೆಯಲ್ಲೂ ವಿಶ್ವದಾಖಲೆ ಸೃಷ್ಟಿಸಿ, ಇತಿಹಾಸದಲ್ಲಿ ಒಂದೇ ಒಲಂಪಿಕ್ಸ್ ನಲ್ಲಿ ‘ಯುಸೈನ್ ಬೋಲ್ಟ್’, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಮೂರರಲ್ಲೂ ವಿಶ್ವದಾಖಲೆಗಳನ್ನು ಮುರಿದ ಮೊದಲಿಗರಾದರು.

ಉಸೇನ್ ಬೋಲ್ಡ್ ದಾಖಲಿಸಿದ ದಾಖಲೆಗಳನ್ನು ಮೀರಿಸುವ ಸಾಧನೆಯನ್ನು ಉಡುಪಿಯ ಕನ್ನಡಿಗರೊಬ್ಬರು ಮಾಡಿದ್ದಾರೆಂದರೆ ನಿಮಗೆ ಅಚ್ಚರೆಯಾಗದೆ ಇರದು. ಉಸೇನ್ ಸಾಧನೆಯನ್ನು ಮೀರಿಸುವ ಸಾಧನೆಯನ್ನು ಮಾಡಿದ ಕನ್ನಡಿಗ ಶ್ರೀನಿವಾಸ ಗೌಡ. ಕಂಬಳ ಓಟದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ 28 ವರ್ಷ ವಯಸ್ಸಿನ ಶ್ರೀನಿವಾಸ್ ಗೌಡ, ಇತ್ತೀಚೆಗೆ ಐಕಳದಲ್ಲಿ ನಡೆದ ಕಂಬಳದಲ್ಲಿ 142.50 ಮೀಟರ್ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಮುಗಿಸಿದ್ದಾರೆ. ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಡ್ 100 ಮೀಟರ್ ದೂರವನ್ನು 9.58 ಸೆಕೆಂಡ್‌ಗಳಲ್ಲಿ ಓಡಿದ್ದು ದಾಖಲೆ ಎನಿಸಿದೆ. ಆದರೆ ಶ್ರೀನಿವಾಸ್ ಗೌಡ ಅವರು 142.50 ಮೀಟರ್ ಓಟವನ್ನು ಕೇವಲ 13.62 ಸೆಗಳಲ್ಲಿ ಓಡಿ ಬೋಲ್ಟ್ ಅವರ ದಾಖಲೆಯನ್ನು ಮೀರಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಜಾನುವಾರುಗಳೊಂದಿಗೆ ಕಂಬಳದಲ್ಲಿ ಓಡಿ ಪ್ರಥಮ ಸ್ಥಾನ ಪಡೆದ ಶ್ರೀನಿವಾಸ ಗೌಡ, ಬೋಲ್ಡ್ ಅವರ ಸಾಧನೆಯನ್ನು ಮೀರಿಸಿದ್ದು ಅಚ್ಚರಿಯ ವಿಷಯ. ಮೂಡುಬಿದಿರೆಯವರಾದ 28 ವರ್ಷ ವಯಸ್ಸಿನ ಶ್ರೀನಿವಾಸ್ ಗೌಡ ಅವರನ್ನು ಕರ್ನಾಟಕದ ಅಷ್ಟೇ ಏಕೆ ಭಾರತದ ಬೋಲ್ಡ್ ಎನ್ನಬಹುದು.

LEAVE A REPLY

Please enter your comment!
Please enter your name here