ದೇಹಕ್ಕೆ ಅಂಗವೈಕಲ್ಯ ಇದೆ ಎಂದರೆ ಕೆಲವರಿಗೆ ಒಂಥರಾ ಕೀಳರಿಮೆ ಇರುತ್ತದೆ. ನಮಗೆ ಜೀವನದಲ್ಲಿ ಇನ್ನು ಮುಂದೆ ಹೋಗಲು ಸಾಧ್ಯವಿಲ್ಲ ಅಂದು ಕೊಳ್ಳುತ್ತಾರೆ. ಆದರೆ ಈ ಬಾಲಕ ಹಾಗಲ್ಲ. ಈ ಬಾಲಕನ ಆತ್ಮ ವಿಶ್ವಾಸ ಮಾತ್ರ ಕುಗ್ಗಿಲ್ಲ. ಬೆಳಗಾವಿ ಬೈಲಹೊಂಗಲ ತಾ. ಇಸ್ಲಾಂಪುರದ ಬಾಲಕ ಕಿರಣ್ ಗೆ ಕೈ ಇಲ್ಲದಿದ್ದರೂ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದಾನೆ. ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡಿದ್ದಾನೆ. ಮೊಣಕೈ ಯಿಂದನೇ ಊಟ ಮಾಡ್ತಾನೆ, ಕಾಲಿನ ಬೆರಳಿನಿಂದಲೇ ಬರೆಯತ್ತಾನೆ. ಈ ಬಾಲಕನ ಬದುಕು ಎಲ್ಲರಿಗೂ ಸ್ಪೂರ್ತಿಯಾಗಿದೆ. ಕೈಯಲ್ಲೂ ಕಾಲಲ್ಲೂ ಬರೀತಾನೆ, ಎಲ್ಲಾ ಕೆಲಸಗಳನ್ನು ತಾನಾಗಿಯೇ ಮಾಡುತ್ತಾನೆ ಎಂದು ಕಿರಣ್ ಅಜ್ಜ ಹೇಳುತ್ತಾರೆ.
ಈತನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ವಿಡಿಯೋ ನೋಡಿ…

Leave a Reply