ಪ್ರೀತಿ ಕುರುಡು ಎಂದು ಹೇಳುತ್ತಾರೆ. ಹೌದು ಪ್ರೀತಿಸಲು ಯಾವುದೇ ಕಾರಣ ಬೇಕಿಲ್ಲ. ಪ್ರೀತಿಗೆ ವಯಸ್ಸಿನ ಕಾಲದ ಮಿತಿಯಿಲ್ಲ. ತಮ್ಮ ವಯಸ್ಸಿನಲ್ಲಿ ವೃದ್ಧರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 65 ನೇ ವಯಸ್ಸಿನ ಬಳಿಕ ನಾನು ಯಾರನ್ನಾದರೂ ಪ್ರೇಮಿಸುತ್ತೇನೆ ಎಂದು ಊಹಿಸಿಯೂ ಇರಲಿಲ್ಲ ಎಂದು ಕೇರಳದ ಲಕ್ಷ್ಮಿ ಅಮ್ಮಳ್ ಹೇಳುತ್ತಾರೆ. ಗಂಡನನ್ನು ಕಳೆದು ಕೊಂಡ ಬಳಿಕ ಲಕ್ಷ್ಮಿಯವರು ಸರ್ಕಾರೀ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದರು. ಅಲ್ಲಿ ಅವರು 67 ವರ್ಷದ ಕೊಚಾನಿಯನ್ ಮೆನನ್ ಅವರನ್ನು ಭೇಟಿಯಾದರು. ಭೇಟಿ ಪರಿಚಯವಾಗಿ ಆತ್ಮೀಯ ಸ್ನೇಹಿತರಾದರು. ನಂತರ ಇಬ್ಬರೂ ಪರಸ್ಪರ ಪ್ರೀತಿಸಲು ತೊಡಗಿ ಮದುವೆಯಾಗಲು ನಿರ್ಧರಿಸಿದರು. ಮಾತ್ರವಲ್ಲ ತಮ್ಮ ನಿರ್ಧಾರವನ್ನು ಸುತ್ತಮುತ್ತಲಿನವರಿಗೂ ತಿಳಿಸಿದರು.

ವೃದ್ದಾಶ್ರಮದ ಸಹಪಾಠಿಗಳು ಈ ಜೋಡಿಗೆ ಮೆಹಂದಿ ಸಂಗೀತ ಕೂಟ ಹೀಗೆ ಎಲ್ಲಾ ಸಾಂಪ್ರದಾಯಿಕ ರಿವಾಜುಗಳೊಂದಿಗೆ ಮದುವೆ ಮಾಡಿಸಿದರು. ಈ ದಂಪತಿಗಳ ವಿಡಿಯೋ ಮತ್ತು ಫೋಟೋಗಳಿಗೆ ನೆಟ್ಟಿಗರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here