ಮಲಪ್ಪುರಂ: ಕೋರೋಣ ಕಾಲದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವ ಈ ಕಾಲದಲ್ಲಿ, ಕೇರಳ ಶಿಕ್ಷಕಿಯೋರ್ವರು ಅವರ ಮನೆಗಳಿಗೆ ತೆರಳಿ ಶಿಕ್ಷಣವನ್ನು ನೀಡುತ್ತಿದ್ದಾರೆ.

ಪರಪ್ಪನಂಗಡಿ ಪಟ್ಟಣದ ಜಿಎಂಎಲ್‌ಪಿ ಶಾಲೆಯ ಶಿಕ್ಷಕಿ ವಿಜಿಶಾ ತಮ್ಮ ವಿದ್ಯಾರ್ಥಿಗಳಿಗೆ ಉಡುಗೊರೆಗಳನ್ನು ನೀಡಿ ಅವರ ಮನೆಗಳಲ್ಲಿ ಕಲಿಸುತ್ತಿದ್ದಾರೆ. ನೋಟ್ಬುಕ್ಗಳು, ಪೆನ್ನುಗಳು ಮತ್ತು ಪಠ್ಯಪುಸ್ತಕಗಳು ಉಡುಗೊರೆಗಳ ರೂಪದಲ್ಲಿ ನೀಡುತ್ತಾರೆ. ವಿವಿಧ ಕಾರಣಗಳಿಂದ ಹೆತ್ತವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಏಕಾಗ್ರತೆ ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಮಕ್ಕಳ ಭವಿಷ್ಯವನ್ನು ಮುಂದಿಟ್ಟು ಶಿಕ್ಷಕರು ಅವರ ಪ್ರದೇಶಕ್ಕೆ ಹೋಗಿ ಕಲಿಸುತ್ತಾರೆ. ಈ ವಿದ್ಯಾರ್ಥಿಗಳು ಪರಪ್ಪನಂಗಡಿ ಬೀಚ್ ಪ್ರದೇಶದವರು.

ವಿಜಿಶಾ ತನ್ನ ಆನ್‌ಲೈನ್ ತರಗತಿಯ ಸಮಯದ ನಂತರ ತನ್ನ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳೊಂದಿಗೆ ಅವರು ಹೆಚ್ಚು ಸಮಯ ಕಳೆಯುತ್ತಾರೆ. ಅವರು 4 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ.

7 Ways to Get Broadband Internet in Rural and Remote Areas - Internet Access Guide

ಹಾಡುಗಳು ಮತ್ತು ಕಥೆಗಳಿಂದ ತುಂಬಿರುವ ಶಿಕ್ಷಕರ ತರಗತಿಯನ್ನು ಕೇಳಲು ವಿದ್ಯಾರ್ಥಿಗಳು ತುಂಬಾ ಆಸಕ್ತಿ ಹೊಂದಿದ್ದಾರೆ. ಪ್ರತಿ ಮನೆಯಲ್ಲಿ ಮೂರು ಗಂಟೆಗಳ ಕಾಲ ಕಳೆಯುತ್ತಾರೆ. ವಿಜಿಷಾ ಪ್ರತಿದಿನ ಒಂದು ಮನೆಗೆ ಭೇಟಿ ನೀಡುತ್ತಾರೆ. COVID ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದಾರೆ ಕೂಡ. ಪೋಷಕರು ಅವರ ಈ ಸೇವೆಗೆ ತುಂಬಾ ಕೃತಜ್ಞರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಅಧ್ಯಯನದ ಹೊರತಾಗಿ ಇತರ ಪಠ್ಯೇತರ ಚಟುವಟಿಕೆಗಳನ್ನೂ ಮಾಡಿಸುತ್ತಾರೆ.

ಅನೇಕ ವಿದ್ಯಾರ್ಥಿಗಳು ತನ್ನ ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದಿಲ್ಲ, ಮಾತ್ರವಲ್ಲ ನೇರ ಕಲಿಸುವ ಮೂಲಕ ವಿದ್ಯಾರ್ಥಿಗಳನ್ನು ಅರಿಯಲು ಸಾಧ್ಯ ಆಗುತ್ತದೆ ಎಂಬ ವಿಚಾರ ಮನಸ್ಸಿಗೆ ಬಂತು. ಆದ್ದರಿಂದ ಹೀಗೊಂದು ಹೆಜ್ಜೆ ಇಟ್ಟೆ ಎಂದು ವಿಜಿಶಾ ಹೇಳಿದರು.

Leave a Reply