ಸೂರತ್ ಅಗ್ನಿ ದುರಂತದಲ್ಲಿ 2 ಹುಡುಗಿಯರ ಜೀವ ರಕ್ಷಿಸಿದ ಯುವಕ ಈಗ ಜನರ ದೃಷ್ಟಿಯಲ್ಲಿ ‘ಹೀರೋ’. ಸೂರತ್ ಅಗ್ನಿ ದುರಂತದಲ್ಲಿ ಕೇತನ್ ಜೋರ್ವಾಡೀಯಾ ಹೆಸರಿನ ಯುವಕ ತನ್ನ ಜೀವನದ ಹಂಗು ತೊರೆದು ಇಬ್ಬರು ಹೆಣ್ಣು ಮಕ್ಕಳ ಜೀವ ರಕ್ಷಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಜನ ಅವರನ್ನು ಹೀರೋ ಎಂದು ಕರೆಯುತ್ತಿದ್ದಾರೆ.

ಘಟನೆಯ ವೀಡಿಯೋದಲ್ಲಿ ಕೇತನ್ ಎರಡನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಹುಡುಗಿಯರಿಗೆ ಕಟ್ಟಡದಿಂದ ಕೆಳಗಿಳಿಯಲು ನೆರವಾಗುತ್ತಿರುವುದನ್ನು ಕಾಣಬಹುದಾಗಿದೆ.  ಈ ದುರಂತದಲ್ಲಿ ಸುಮಾರು 20  ಮಂದಿ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜೀವ ಉಳಿಸಿ ಕೊಳ್ಳುವುದಕ್ಕೋಸ್ಕರ ಕೆಲವು ವಿದ್ಯಾರ್ಥಿಗಳು ನಾಲ್ಕು ಮಹಡಿಯ ಕಟ್ಟಡದಿಂದ ಜಿಗಿದಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳು ಸುಮಾರು 14  ರಿಂದ 17  ವಯಸ್ಸಿನ ಆಸು ಪಾಸಿನವರಾಗಿದ್ದು, ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೊಂದು ಕಮರ್ಷಿಯಲ್ ಬಿಲ್ಡಿಂಗ್ ಎಂದು ಹೇಳಲಾಗಿದ್ದು, ಮಕ್ಕಳು ಜೀವ ವುಳಿಸಲು ಹಾರಿದ ಪರಿಣಾಮವಾಗಿ ಕೆಲವರ ಜೀವ ಹೋಗಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ನಾನು ಈ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ಮಕ್ಕಳು ಬೆಂಕಿಯಿಂದ ರಕ್ಷಣೆಗಾಗಿ ಕಟ್ಟಡದಿಂದ ಹಾರುವುದು ನನ್ನ ಗಮನಕ್ಕೆ ಬಂತು. ಬಳಿಕ ನಾನು ಏಣಿ ತೆಗೆದು ಹತ್ತಿ ಸುಮಾರು ಹತ್ತು ಸಣ್ಣ ಮಕ್ಕಳನ್ನು ರಕ್ಷಿಸಿದೆ. ಬಳಿಕ ಮತ್ತೊಂದು ಬದಿಗೆ ಹೋಗಿ ಪೈಪ್ ಮೂಲಕ ಹತ್ತಿ ಇಬ್ಬರನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಫೈರ್ ಬ್ರಿಗೇಡ್ ನವರು ಸುಮಾರು ನಲವತ್ತು ನಿಮಿಷಗಳ ಬಳಿಕ ಅವಘಡ ಪ್ರದೇಶಕ್ಕೆ ತಲಪಿದರು. ಅವರ ಬಳಿ ಯಾವುದೇ ಸವಲತ್ತು ಇರಲಿಲ್ಲ. ಕೆಳಗೆ ಮಕ್ಕಳನ್ನು ಹಿಡಿಯಲು ನಿಂತವರ ಬಳಿಯೂ ಏನೂ ಇರಲಿಲ್ಲ ಎಂದು ಕೇತನ್ ಖೇದ ವ್ಯಕ್ತ ಪಡಿಸಿದರು.

 

 

Leave a Reply