ಇದೇ ಬರುವ ಎಪ್ರಿಲ್‌ 4ರಿಂದ‌ ಮೇ 31ರ ತನಕ ಶುರುವಾಗಲಿರುವ ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಕ್ರಿಕೆಟ್ ಪ್ರೇಮಿಗಳು ಈಗಾಗಲೇ ತಮ್ಮ ನೆಚ್ಚಿನ ತಂಡ ಹಾಗೂ ಆಟಗಾರರ ಆಟವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ.‌ ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಹಲವಾರು ಬದಲಾವಣೆ ತಂದಿರುವುದರಿಂದ ಕ್ರಿಕೆಟ್ ಪ್ರೇಮಿಗಳಿಗಳಿಗೆ ಒಂದಿಷ್ಟು ನಿರಾಶೆಯೊಂದಿಗೆ ಅಚ್ಚರಿ ತಂದಿದೆ.

ಯಾರನ್ನೆಲ್ಲ ತಂಡ ಉಳಿಸಿಕೊಂಡಿದೆ?

ಈ ಬಾರಿಯ‌ ಐಪಿಎಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಿಂದ ಹೊರಗುಳಿದಿದ್ದ ಎಂಎಸ್ ದೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಎಂಟ್ರಿ ಕೊಡಲಿದೆ. ಈ ಬಾರಿ ಚೆನ್ನೈ ತಂಡದಲ್ಲಿ ನಾಯಕ ಎಂ.ಎಸ್ ದೋನಿ, ಸುರೇಶ್ ರೈನಾ ಹಾಗೂ ಆಲ್‌ ರೌಂಡರ್ ಜಡೆಜಾರನ್ನು ಮಾತ್ರವೇ ಉಳಿಸಿಕೊಂಡಿದೆ.

ಕನ್ನಡಿಗರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ತಂಡದಲ್ಲಿ ಕಪ್ತಾನ ವಿರಾಟ್ ಕೋಹ್ಲಿ, ಎಬಿಡಿ ವಿಲ್ಲಿಯರ್ಸ್, ಸರ್ಫ್ರಾಝ್ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.‌ ಫಂಡ್ ಮೇಲೆ ಮಿತಿ ಇರುವ ಕಾರಣ ಮತ್ತೊರ್ವ ಕನ್ನಡಿಗ, ಡ್ಯಾಶಿಂಗ್ ಓಪನರ್ ಕೆಎಲ್ ರಾಹುಲ್‌ನನ್ನು ತಂಡ ಕೈ ಬಿಟ್ಟು ಕನ್ನಡಿಗರಿಗೆ ಒಂದಿಷ್ಟು ನಿರಾಶೆಯನ್ನು ಮೂಡಿಸಿದೆ.

ದಿಲ್ಲಿ ಡೇರ್‌ ಡೇವಿಲ್ಸ್ ತಂಡದಲ್ಲಿ ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡದ ಕ್ರಿಸ್ ಮೋರಿಸ್, ಭಾರತದ ತಂಡದಲ್ಲಿ ಕಳೆದ ವರ್ಷ ಕೊನೆಯಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆಗೈದು ಅಚ್ಚರಿಯ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್, ರಿಷಬ್ ಪಾಂಥ್‌ರನ್ನು ತಂಡದಲ್ಲಿ ಉಳಿಸಿಕೊಂಡಿದೆ.

ಇನ್ನುಳಿದಂತೆ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ಅಕ್ಷರ್ ಪಟೇಲ್, ಕೊಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಸುನಿಲ್ ನರೇನ್, ಅಂದ್ರೆ ರಸ್ಸೆಲ್‌ರನ್ನು ಉಳಿಸಿಕೊಂಡರೆ, ಮುಂಬಯಿ ಇಂಡಿಯನ್ಸ್‌ನಲ್ಲಿ ಕಪ್ತಾನ ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ ಹಾರ್ದಿಕ್ ಪಾಂಡ್ಯರನ್ನು ಉಳಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್‌ನಲ್ಲಿ ಸ್ಟಿವ್ ಸ್ಮಿತ್, ಸನ್ ರೈಸ್ ಹೈದರಾಬಾದ್‌‌ನಲ್ಲಿ ಭುವನೇಶ್ವರ್ ಕುಮಾರ್, ಡೇವಿಡ್‌ ವಾರ್ನರ್‌ ರನ್ನು ಉಳಿಸಿಕೊಂಡಿದೆ.

ಇದೇ ತಿಂಗಳ 27, 28ರಂದು ಬೆಂಗಳೂರಿನಲ್ಲಿ ಐಪಿಎಲ್ ಬಿಡ್ಡಿಂಗ್‌ ನಡೆಯಲಿದ್ದು, ಯಾವ ಸ್ಟಾರ್ ಯಾವ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಉಳಿಸಿಕೊಂಡ ಆಟಗಾರರ ಪಟ್ಟಿ:

ಆರ್‌ಸಿಬಿ ಬೆಂಗಳೂರು: ವಿರಾಟ್ ಕೋಹ್ಲಿ, ಎಬಿಡಿ ವಿಲ್ಲಿಯರ್ಸ್, ಸರ್ಫ್ರಾಝ್ ಖಾನ್.

ಮುಂಬಯಿ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ.

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ದೋನಿ, ಸುರೇಶ್ ರೈನಾ, ರವೀಂದ್ರ ಜಡೆಜಾ,

ಕೊಲ್ಕತ್ತಾ ನೈಟ್ ರೈಡರ್ಸ್: ಅಂದ್ರೆ ರಸೆಲ್, ಸುನಿಲ್ ನರೇನ್.

ಸನ್‌ರೈಸ್ ಹೈದರಾಬಾದ್: ಭುವನೇಶ್ವರ್ ಕುಮಾರ್, ಡೇವಿಡ್ ವಾರ್ನರ್.

ದಿಲ್ಲಿ ಡೇರ್ ಡೆವಿಲ್ಸ್: ಕ್ರಿಸ್ ಮೋರಿಸ್, ರಿಷಬ್ ಪಾಂಥ್, ಶ್ರೇಯಸ್ದ ಅಯ್ಯರ್.

ರಾಜಸ್ತಾನ್ ರಾಯಲ್ಸ್: ಸ್ಟೀವ್ ಸ್ಮಿತ್.

ಕಿಂಗ್ಸ್ ಇಲೆವೆನ್ ಪಂಜಾಬ್: ಅಕ್ಷರ್ ಪಟೇಲ್.

Leave a Reply