ಭಾರತದಲ್ಲಿ ಕ್ರಿಕೆಟ್ ಮತ್ತು ಚಲನಚಿತ್ರಗಳು ತುಂಬಾ ನಿಕಟ ಸಂಬಂಧವನ್ನು ಹೊಂದಿದೆ. ಅನೇಕ ಕ್ರಿಕೆಟಿಗರು ಚಲನಚಿತ್ರಗಳಿಗೆ ಕೈಹಾಕಿ ಪ್ರಯತ್ನಿಸಿದರೂ ಅವರಿಗೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ ಎಂಬುದು ಬೇರೆ ಮಾತು. ಇದೀಗ ಭಾರತೀಯ ಕ್ರಿಕೆಟ್ ನ ಖ್ಯಾತ ಆಲ್ರೌಂಡರ್ ಗಳಲ್ಲಿ ಒಬ್ಬರಾದ ಇರ್ಫಾನ್ ಪಠಾಣ್ ದಕ್ಷಿಣಭಾರತದ ಚಿತ್ರದಲ್ಲಿ ನಟಿಸುವ ಬಗ್ಗೆ ಸಂಜೀವಿನಿ ಟುಡೇ ವರದಿ ಮಾಡಿದೆ.

ಆದರೆ ಇರ್ಫಾನ್ ಪಠಾಣ್ ತನ್ನ ಧರ್ಮದ ತತ್ವಗಳಿಗೆ ವಿರುದ್ಧವಾಗಿ ಶರ್ಟ್ ತೆಗೆದು ನಟಿಯೊಂದಿಗೆ ನೃತ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ನಾನು ಚಿತ್ರದಲ್ಲಿ ನಟಿಸಿದರೂ ಶರ್ಟ್ ತೆಗೆಯಲ್ಲ ಅಥವಾ ಚಲನಚಿತ್ರದಲ್ಲಿ ಯಾವುದೇ ಹೀರೋಯಿನ್ ಡ್ಯಾನ್ಸ್ ಮಾಡುವುದಿಲ್ಲ. ಚಿತ್ರರಂಗಕ್ಕೆ ಕಾಲಿಟ್ಟರು ಧರ್ಮದ ವಿಷಯದಲ್ಲಿ ಯಾವುದೇ ಇಸ್ಲಾಂ ಧರ್ಮದ ತತ್ವಗಳ ಕುರಿತು ರಾಜಿ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾಗಿ ನಿರ್ದೇಶಕ ವಿಜಯ ಸ್ಪಷ್ಟಪಡಿಸಿದ್ದಾರೆ.

ಇರ್ಫಾನ್ ಪಠಾಣ್ ಚಿತ್ರದಲ್ಲಿ ಇನ್ಸ್ಪೆಕ್ಟರ್ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಶೀಘ್ರದಲ್ಲಿ ಚಿತ್ರದ ಕುರಿತು ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ವಿಕ್ರಮ್ ನಟಿಸುತ್ತಿದ್ದಾರೆ. ಪ್ರಸ್ತುತ ಇರ್ಫಾನ್ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ಅತಿ ಹೆಚ್ಚು ಸಫಲವಾಗಿದ್ದಾರೆ. ಇದೀಗ ಚಿತ್ರ ರಂಗಕ್ಕೆ ಕಾಲಿಟ್ಟಿರುವ ಅವರು ತನ್ನ ಪಾತ್ರವನ್ನು ಹೇಗೆ ನಿರ್ವಹಿಸಬಹುದು ಎಂದು ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here