ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇಸ್ರೋ ಮುಖ್ಯಸ್ಥರಿಗಾಗಿ ಜನರು ಚಪ್ಪಾಳೆ ತಟ್ಟುವ ವಿಡಿಯೋ ವೈರಲ್ ಆಗಿದೆ. ಇಸ್ರೋ ಮುಖ್ಯಸ್ಥ ಕೆ.ಕೆ. ಶಿವನ್‌ ರಿಗೆ ವಿಮಾನದಲ್ಲಿ ಜನರು ಚಪ್ಪಾಳೆ ತಟ್ಟುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಾತ್ರವಲ್ಲ, ಈ ವಿಡಿಯೋದಲ್ಲಿ ಏರ್ ಹೊಸ್ಟೆಸ್ ಒಬ್ಬಳು ಶಿವನ್ ರವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತದೆ.

ಈ ವೀಡಿಯೊದಲ್ಲಿ, “ಭಾರತ ಬದಲಾಗುತ್ತಿದೆ. ಈ ಹಿಂದೆ ಸಿನೆಮಾ ನಟರನ್ನು ಜನರು ಗುರುತಿಸುತ್ತಿದ್ದರು ಈಗ ನಿಜವಾಗ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪ್ರಶಂಸಿಸಲಾಗುತ್ತಿದೆ ಎಂದು ಟ್ವಿಟರ್ ಬಳಕೆದಾರೊಬ್ಬರು ಬರೆದಿದ್ದಾರೆ.

“ನಾನು ಮೊದಲು ಭಾರತೀಯ” ಎಂಬ ಉತ್ತರ ಇತ್ತೀಚಿಗೆ ಹೇಳುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಕೈಲಾಸವಾಡಿವ ಶಿವನ್ ರವರು ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದರು. . ಸನ್ ಟಿವಿ ನಿರೂಪಕ, ಅವರನ್ನು ಓರ್ವ ತಮಿಳನಾಗಿ ಇಷ್ಟು ದೊಡ್ಡ ಸ್ಥಾನ ಪಡೆದ ತಾವು ತಮಿಳುನಾಡಿನ ಜನರಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ಅವರು ಈ ಉತ್ತರ ನೀಡಿದ್ದರು.

LEAVE A REPLY

Please enter your comment!
Please enter your name here