ಕನ್ನಡ ನಾಡಿನಲ್ಲಿ ಹುಟ್ಟಿ ಈಗ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ರಜಿನಿಕಾಂತ್ ಬಗ್ಗೆ ನಮಗೆಲ್ಲರಿಗೂ ಗೊತ್ತು, ಆದ್ರೆ ಒಂದು ವಿಷಯ ನಿಮಗೆ ಗೊತ್ತಿಲ್ಲದೇ ಇರಬಹುದು, ಅದು ರಜಿನಿ ದತ್ತು ತಂದೆಯ ಬಗ್ಗೆ ಹೌದು ಇವರಿಗೆ ಒಬ್ಬರು ದತ್ತು ತಂದೆ ಇದ್ದಾರೆ.
ಒಂದು ಇನ ಕಲ್ಯಾಣಸುಂದರಂ ಅನ್ನೋರನ್ನು ದತ್ತು ತಂದೆಯಾಗಿ ಸ್ವೀಕರಿಸುತ್ತಿರುವುದಾಗಿ ಪ್ರಕಟಿಸಿದರು ರಜಿನಿಕಾಂತ್, ಆಗ ಎಲ್ಲರಿಗೂ ಆಶ್ಚರ್ಯ ಯಾರೀ ಕಲ್ಯಾಣಸುಂದರಂ? ಯಾಕಾಗಿ ರಜಿನಿ ಇವರನ್ನು ದತ್ತು ತಂದೆಯಾಗಿ ಸ್ವೀಕರಿಸಿದರು?
ಒಂದು ಕುಗ್ರಾಮದಲ್ಲಿ ಹುಟ್ಟಿದ ಕಲ್ಯಾಣಸುಂದರಂ, ಲೈಬ್ರರಿ ಸೈನ್ಸ್ ಓದಿ, ಒಂದು ಕಾಲೇಜ್ ನಲ್ಲಿ 40 ವರ್ಷ ಲೈಬ್ರರಿಯನ್ ಆಗಿ ಕೆಲಸ ಮಾಡಿದರು, ಮದುವೆಯಾಗಿಲ್ಲ, ರಿಟೈರ್ಡ್ ಆದ ಮೇಲೆ ಕಾಲಕ್ಷೇಪಕ್ಕಾಗಿ ಒಂದು ಹೋಟಲ್ ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಲ್ಯಾಣಸುಂದರಂ ಅವರಿಗೆ ಸಹೃದಯ ಮನಸ್ಸು, ತಾನು ಕೆಲಸ ಮಾಡುತ್ತಿದ್ದಾಗ ಬಂದ ಸಂಬಳವನ್ನು ಜಿಲ್ಲೆಯ ಕಲೆಕ್ಟರ್ ಗೆ ಕೊಟ್ಟು ಅನಾಥ ಮಕ್ಕಳಿಗಾಗಿ ಬಳಸುವಂತೆ ಹೇಳುತ್ತಿದ್ದರು, ಆಸ್ತಿಯಿಂದ ಹಾಗೂ ರಿಟೈರ್ಡ್ ಆದಾಗ ಬಂದ 30 ಲಕ್ಷವನ್ನು ಸಮಾಜಕ್ಕಾಗಿಯೇ ಬಳಸಿದರು.
ಕಲ್ಯಾಣಸುಂದರಂ ಅವರ ಒಳ್ಳೆಯ ಗುಣ ಅರಿತ ಅಮೇರಿಕಾ, ಮ್ಯಾನ್ ಆಫ್ ಮಿಲೇನಿಯಂ ಎಂದು ಗೌರವಿಸಿ 30 ಕೋಟಿ ಹಣವನ್ನು ಅವರಿಗೆ ಕೊಟ್ಟಿತು, ಆದ್ರೆ, ಎಲ್ಲಾ ಹಣವನ್ನು ಸುನಾಮಿ ಪೀಡಿತರಿಗೆ ಕೊಟ್ಟರು ಕಲ್ಯಾಣಸುಂದರಂ.
ಇಷ್ಟೆಲ್ಲಾ ಗುಣಗಳಿರುವ ಕಲ್ಯಾಣಸುಂದರಂ ಅವರ ಬಗ್ಗೆ ಅರಿತ ರಜಿನಿ ಅವರನ್ನು ದತ್ತು ತಂದೆಯಾಗಿ ಪಡೆದರು ಇದರಿಂದ ತುಂಬಾ ಸಂತೋಷಪಡುವ ಕಲ್ಯಾಣಸುಂದರಂ, ಹೆಮ್ಮೆಯಿಂದ ರಜಿನಿ ನನ್ನ ಮಗ, ತಂದೆಯಾಗಿ ಅವರ ಮನೆಗೆ ಹೋಗೋ ಅಧಿಕಾರ ನನಗಿದೆ ಎಂದು ಹೇಳುತ್ತಾರೆ.
ಕೃಪೆ ಚಂದನವನ