ಇಂಡೋನೇಷ್ಯಾದ ಜಾಕರ್ತ ದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 400 ಮೀಟರ್ ನಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ತ್ರಿತೀಯ ಬಿಹೆಚಾರ್ಡಿ ವಿದ್ಯಾರ್ಥಿ ಧಾರುಣ್ ಅಯ್ಯ ಸ್ವಾಮಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

400 ಮೀಟರ್ ಹರ್ಡಲ್ಸ್ ಅನ್ನು 48.96 ಸೆಕೆಂಡ್ ಗಳಲ್ಲಿ ಅವರು ಕ್ರಮಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ೪೦೦ ಮೀಟರ್ ಹರ್ಡಲ್ಸ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಅಖಿಲ ಭಾರತ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮೂರು ಬಾರಿ ಚಿನ್ನ ಪಡೆದ ಸಾಧನೆ ಮಾಡಿದ್ದಾರೆ. ಈ ಸಾಧನೆಗಾಗಿ ಯುನಿವರ್ಸಿಟಿ ಒಂದು ಲಕ್ಷ ಬಹುಮಾನ ನೀಡಿ ಗೌರವಿಸಿತ್ತು.

ಧಾರುಣ್ 2016 ರ ರಿಯೋ ಒಲಂಪಿಕ್ಸ್ ಮತ್ತು2017 ರ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

Leave a Reply