ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಎಐಡಿಎಂಕೆ ಅಧ್ಯಕ್ಷ ಸ್ಥಾನವನ್ನು ಪಡೆದು ಮುಖ್ಯಮಂತ್ರಿಯಾಗಲು ದಿನಕರನ್ ಸಂಚು ಹೂಡ ತೊಡಗಿದ್ದರು ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಎಐಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಗಂಭೀರವಾದ ಆರೋಪ ಮಾಡಿದ್ದಾರೆ.
ಅಮ್ಮ ಜೀವಂತವಿರುವಾಗಲೇ ಅಧಿಕಾರ ವಶಪಡಿಸಲು ಶ್ರಮಿಸಿದ್ದರು. ಈಗ ನಮ್ಮನ್ನೇ ವಿಶ್ವಾಸ ವಂಚಕರೆಂದು ಟೀಕಿಸುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 234ರಲ್ಲಿ 200 ಸ್ಥಾನ ಗಳಿಸುವ ಕನಸನ್ನು ಧಿನಕರನ್ ಕಾಣುತ್ತಿದ್ದಾರೆಂದು ಎಂದೂ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ದಿನಕರನ್, ಇನ್ನು ಒಮ್ಮೆಯೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲವೆಂಬ ನಿರಾಶೆಯಿಂದ ಪನ್ನೀರ್ ಸೆಲ್ವಂ ಇಂತಹ ಹತಾಶೆಯಿಂದ ಕೂಡಿದ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಹೇಳಿದ್ದಾರೆ.