ಮರಣವನ್ನು ಅನುಭವಿಸಲು ಬಯಸುತ್ತೇನೆ,ತಂದೆ ತಾಯಿಯನ್ನು ನೋಡಿಕೊಳ್ಳಿ ಎಂದು ಬರೆದಿಟ್ಟು ಜೆಎನ್ಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಮಾಹಿತಿಯಂತೆ,ಇತ್ತೀಚೆಗೆ ಜೆಎನ್ಯೂ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಮ್ಎ ಸೆಕೆಂಡ್ ಇಯರ್ ನ ವಿದ್ಯಾರ್ಥಿ ರಿಷಿ ಥಾಮಸ್ ತನ್ನ ಪ್ರೊಫೆಸರ್ ಗೆ ಕಳುಹಿಸಿದ ಆತ್ಮಹತ್ಯಾ ನೋಟ್ನಲ್ಲಿ, ತನಗೆ ಮರಣವನ್ನು ಅನುಭವಿಸುವ ಬಯಕೆಯಿದೆ ಎಂದು ಬರೆದಿದ್ದನು.
“ನೀವು ಇದನ್ನು ಓದುವಾಗ ನಾನು ಜೀವಂತ ಇರಲಿಕ್ಕಿಲ್ಲ..ನನ್ನ ಹೆತ್ತವರನ್ನು ನೋ‌ಡಿಕೊಳ್ಳಿ” ಎಂಬುದಾಗಿ ನೋಟ್ ನಲ್ಲಿ ಬರೆಯಲಾಗಿತ್ತು.ಥಾಮಸ್ ಲೈಬ್ರರಿ ಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ನಂತರ, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಅವನು ದೇಹಕ್ಕೆ ಅದರ ಅನುಭವವನ್ನು ಪಡೆಯಲು ಬಯಸುತ್ತಿದ್ದ ಎಂದು ಬಾಹ್ಯವಾಗಿ ನೋಡುವಾಗ ಕಾಣುತ್ತಿದೆ. ಆದರೆ ಸಾವನ್ನು ಅನುಭವಿಸಲಿಕ್ಕಾಗಿ ಆತ ಹೀಗೆ ಮಾಡಿದ್ದಾನೆ ಎಂಬುದು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಅವನು ಹೀಗೆ ಬೇರೆ ಯಾರೊಂದಿಗಾದರೂ ಹೇಳಿದ್ದಾನೆಯೇ ಎಂದು ನೋಡಬೇಕಾಗಿದೆ ಎಂದು ಎಂದು ಡಾ ಮಿತ್ರಾ ಹೇಳಿದರು.
ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು ಆತ ಖಿನ್ನತೆಗೊಲಾಗಿದ್ದು ಅವರಿಗೆ ಕಂಡು ಬಂದಿಲ್ಲ. ಕೆಲ ವಾರಗಳಿಂದ ಏಕಾಂಗಿಯಾಗಿರುತ್ತಿದ್ದ ಎಂದು ಆತನ ಸಹಪಾಠಿಗಳು ಹೇಳಿದ್ದಾರೆ. ಎಲ್ಲರಿಗೂ ಶಾಂತಿ ಸಮಾಧಾನ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ (“I pray for the peace of all living and abiding things) ಎಂದು ಆತ ಬರೆದಿದ್ದಾನೆ.

Leave a Reply