ಭಾರತದಲ್ಲಿ ಮಹಿಳೆಯರು ಹಲವಾರು ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಸಾಧನೆಯನ್ನು ತೋರುತ್ತಿದ್ದಾರೆ. ಆದರೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರತಿ ಹತ್ತು ಮಹಿಳೆಯರಲ್ಲಿ ಒಬ್ಬರು ತಮ್ಮ ಕೆಲಸದ ಸ್ಥಳದಲ್ಲಿ ಕಿರುಕುಳಕ್ಕೊಳಗಾಗುತ್ತಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ದೃಷ್ಟಿ ಮಹಿಳಾ ಅಧ್ಯಯನ ಕೇಂದ್ರದ ಇತ್ತೀಚಿನ ಅಧ್ಯಯನದಲ್ಲಿ ಹೇಳಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಅಧ್ಯಯನದಲ್ಲಿ ದೇಶದ 64 ಪ್ರತಿಶತ ಜಿಲ್ಲೆಗಳಲ್ಲಿ 74095 ಉದ್ಯೋಗಸ್ಥ ಮಹಿಳೆಯರ ಜೊತೆ ಮಾತನಾಡಲಾಗಿದೆ. ಸರ್ಕಾರಿ ಗುರುತಿನ ಚೀಟಿಗಳು, ಬ್ಯಾಂಕಿಂಗ್ ಸೌಲಭ್ಯಗಳು, ಶಿಕ್ಷಣ, ಆರೋಗ್ಯ, ಉದ್ಯೋಗ, ಇತರ ಹಲವು ಕ್ಷೇತ್ರಗಳಲ್ಲಿ ಅವರ ಸ್ಥಿತಿಗತಿಗಳ ಬಗ್ಗೆ ಸಂಗತಿಗಳನ್ನು ಸಂಗ್ರಹಿಸಲಾಗಿದೆ. ಹೆಚ್ಚಿನವರಿಗೆ ಕಚೇರಿಯಲ್ಲಿ ಅಧಿಕೃತ ದೂರಿನ ಆಯ್ಕೆಯೇ ಇಲ್ಲ.
ಕೇವಲ 69 ಪ್ರತಿಶತದಷ್ಟು ಕೆಲಸದ ಸ್ಥಳಗಳಲ್ಲಿ ಸಮಯದಲ್ಲಿ ಶೌಚಾಲಯದಂತಹ ಮೂಲಭೂತ ಸೌಲಭ್ಯಗಳು ಇವೆ. ಕೇವಲ 51 ಪ್ರತಿಶತದಷ್ಟು ಮಹಿಳೆಯರು ಮಾತ್ರ ವಾರಕ್ಕೊಮ್ಮೆ ರಜೆ ಪಡೆಯುತ್ತಾರೆ. ಶೇಕಡಾ 87 ರಷ್ಟು ಕೆಲಸದ ಸ್ಥಳಗಳಲ್ಲಿ ಮಕ್ಕಳ ಆರೈಕೆಗಾಗಿ ಸರಿಯಾದ ಸೌಲಭ್ಯವಿಲ್ಲ. ಈ ಕಾರಣದಿಂದ ಹೆರಿಗೆಯ ಬಳಿಕ ಹೆಚ್ಚಿನ ಮಹಿಳೆಯರು ತಮ್ಮ ಉದ್ಯೋಗವನ್ನು ಬಿಡುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
ಸಂಬಳ ಕಡಿಮೆಯ ಬಗ್ಗೆ ಆಕ್ಷೇಪ ಇಲ್ಲ
ಮಹಿಳೆಯರಿಗೆ ಸಂತೋಷಕ್ಕೂ ಆದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನವು ಹೇಳಿದೆ. ಖಾಸಗಿ ವಲಯದಲ್ಲಿ ವೇತನದ ಬಗ್ಗೆ ತಾರತಮ್ಯದ ಹೊರತಾಗಿಯೂ, ಪುರುಷ ಉದ್ಯೋಗಿಗಳಿಗಿಂತ ಮಹಿಳೆಯರು ಸಂತೋಷದಿಂದಿದ್ದಾರೆ.
ದೇಶದ ಶೇಕಡಾ 82 ರಷ್ಟು ಮಹಿಳೆಯರು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ, 79 ಪ್ರತಿಶತದಷ್ಟು ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ ಮತ್ತು 64 ಪ್ರತಿಶತದಷ್ಟು ಜನರು ಪ್ಯಾನ್ ಕಾರ್ಡ್ ಹೊಂದಿದ್ದಾರೆ ಎಂದು ತಿಳಿದುಬಂದಿದೆ. 2011 ರ ಜನಗಣತಿಯ ನಂತರ ಮಹಿಳಾ ಸಾಕ್ಷರತೆಯ ಪ್ರಮಾಣವು ಶೇಕಡಾ 15 ರಷ್ಟು ಹೆಚ್ಚಾಗಿದೆ.