ಹೊಸದಿಲ್ಲಿ: ಉತ್ತರಪ್ರದೇಶದ ಅಲಾಹಾಬಾದಿನ ಹೆಸರು ಪ್ರಯಾಗ್‍ರಾಜ್ ಎಂದು ಬದಲಾಯಿಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ್ ಘೋಷಣೆಯ ಬೆನ್ನಿಗೆ ರಾಜ್ಯದ ಹದಿನೆಂಟು ನಗರಗಳಿಗೆ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಹೊಸ ಹೆಸರುಗಳನ್ನು ಸೂಚಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಯೋಗಿ ಆದಿತ್ಯನಾಥ್‍ರನ್ನು ಸಂಬೋಧಿಸಿ ಕಾಟ್ಜು ಟ್ವೀಟ್ ಮಾಡಿದ್ದಾರೆ. ಅಭಿನಂದನೆಗಳು ಅಲಾಹಾಬಾದ್‍ನ್ನು ಪ್ರಯಾಗ್ ಎಂದು ಮರು ನಾಮಕರಣ ಮಾಡಿದ್ದಕ್ಕೆ ಎಂದು ಕಾಟ್ಜು ಟ್ವೀಟ್ ಮಾಡಿದ್ದು ಉತ್ತರಪ್ರದೇಶದ 18 ನಗರಗಳಿಗೆ ಹೊಸ ಇರಿಸಬೇಕೆಂದು ಸಲಹೆ ನೀಡಿದ್ದಾರೆ.

ಫೈಝಲಾ ಬಾದಿಗೆ ನರೇಂದ್ರಮೋದಿಪುರ,ಫತೇಪುರಕ್ಕೆ ಅಮಿತ್‍ಶಾ ನಗರ ಮತ್ತು ಮೊರದಾಬಾದಿಗೆ ಮನ್‍ಕಿಬಾತ್ ನಗರ ಎಂದು ಹೆಸರಿರಿಸಲು ಕಾಟ್ಜು ಹೇಳಿದ್ದಾರೆ.

ಅವರು ಸೂಚಿಸಿದ ಹೆಸರುಗಳ ಪಟ್ಟಿ ಹೀಗಿದೆ…

ಅಲಿಗಡ-ಆಸ್ವತ್ಥಾತ್ಮ ನಗರ
ಆಗ್ರ-ಅಗಸ್ತ್ಯ ನಗರ
ಗಾಝಿ ಪುರ- ಗಣೇಶಪುರ
ಶಾಜಾನಪುರ-ಸುಗ್ರೀವನಗರ
ಮುಝಫ್ಫರ್‍ಪುರ-ಮುರಳೀಮನೋಹರ ನಗರ
ಅಝಂಗಡ-ಅಲಕ್‍ನಂದಪುರ
ಲಕ್ನೊ-ಲಕ್ಷ್ಮಣಪುರ
ಬುಲಂದ್ ಶಹರ್-ಬಜ್ರರಂಗ್ಬಲಿ ಪುರ
ಫೈಝಾಬಾದ್-ನರೇಂದ್ರಮೋದಿಪುರ
ಪತೇಪು- ಅಮಿತ್ ಶಾ ನಗರ
ಗಾಝಿಯಾಬದ್-ಗಜೇಂದ್ರನಗರ
ಫಿರೋಝಾ ಬಾದ್-ದ್ರೋಣಾಚಾರ್ಯನಗರ
ಫಾರೂಖಾ ಬಾದ್-ಅಂಗದ್‍ಪುರ
ಗಾಝಿಯಾಬಾದ್-ಘಟೋತ್ಕಚ ನಗರ
ಸುಲ್ತಾನ್‍ಪುರ-ಸರಸ್ವತಿ ನಗರ
ಮೊರದಾಬಾದ್-ಮನ್‍ಕೀಬಾತ್ ನಗರ
ಮಿರ್ಝಾಪುರ- ಮೀರಾ ಬಾಯಿ ನಗರ

Leave a Reply