ಬೇಕಾಗುವ ಸಾಮಗ್ರಿಗಳು:
ಕೋಳಿ – 1/2 ಕೆ.ಜಿ., ಗೇರು ಬೀಜ – 15, ತೆಂಗಿನ ಕಾಯಿ ಹಾಲು – 1 ಗ್ಲಾಸ್, ಕೊತ್ತಂಬರಿ ಹುಡಿ – 11/2 ಟೀ ಸ್ಪೂನ್, ಗರಂ ಮಸಾಲ – 1 ಟೀ ಸ್ಪೂನ್, ಶುಂಠಿ ಬೆಳ್ಳುಳಿ ಪೇಸ್ಟ್ – 1/2 ಟೀ ಸ್ಪೂನ್, ಮೊಸರು – 1/2 ಕಪ್, ಕರಿಮೆಣಸು – 1/2 ಟೀ ಸ್ಪೂನ್, ನೀರುಳ್ಳಿ ಪೇಸ್ಟ್ – 2 ಈರುಳ್ಳಿದ್ದು, ಕಾಯಿ ಮೆಣಸು – 6, ಹಳದಿ ಹುಡಿ – 1/4 ಟೀ ಸ್ಪೂನ್, ತುಪ್ಪ + ಎಣ್ಣೆ – 2 ಟೀ ಸ್ಪೂನ್, ಉಪ್ಪು
ತಯಾರಿಸುವ ವಿಧಾನ:
ಶುಚಿಗೊಳಿಸಿದ ಕೋಳಿಯನ್ನು ಉಪ್ಪು ಮೊಸರು, ಹಳದಿ ಹುಡಿ ಹಾಕಿ 1/2 ಗಂಟೆ ತನಕ ಇಡಿ. ಗೇರು ಬೀಜ ಹಾಗೂ ಕಾಯಿ ಮೆಣಸಿಗೆ ತೆಂಗಿನ ಹಾಲು ಸೇರಿಸಿ ರುಬ್ಬಿಟ್ಟು ಕೊಳ್ಳಿ. ಒಂದು ಪಾತ್ರೆಯಲ್ಲಿ ತುಪ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಫ್ರೈ ಮಾಡಿ. ಅದಕ್ಕೆ, ನೀರುಳ್ಳಿ ಪೇಸ್ಟ್ ಹಾಕಿ, ಉದ್ದಕ್ಕೆ ಕತ್ತರಿಸಿದ ಕಾಯಿ ಮೆಣಸು ಸೇರಿಸಿ ಕೈಯಾಡಿಸಿ. ತಕ್ಷಣ ಕೊತ್ತಂಬರಿ ಹುಡಿ ಹಾಕಿ ಕೈಯಾಡಿಸಿ ಕೋಳಿ ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿ ಬೇಯಲು ಬಿಡಿ. ಬೆಂದ ಕೋಳಿಗೆ ಅರೆದ ಗೇರು ಬೀಜ ಪೇಸ್ಟ್ ಮತ್ತು ಗರಂ ಮಸಾಲ ಹಾಗೂ ತೆಂಗಿನ ಹಾಲು ಹಾಕಿ ಕುದಿಸಿ.