ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮಹಮ್ಮದ್ ಕೈಫ್ ವಿವಾದಕ್ಕೀಡಾಗಿದ್ದಾರೆ. ಟ್ವಿಟರಿನಲ್ಲಿ ಕ್ರಿಸ್ಮಸ್ ಶುಭಾಶಯ ಕೋರಿದ್ದು ಕೆಲವರ ಅಸಹನೆಗೆ ಕಾರಣವಾಗಿದೆ. ಅವರು ತಮ್ಮ ಪರಿವಾರದೊಂದಿಗೆ ಕ್ರಿಸ್ಮಸ್ ಆಚರಿಸಿರುವ ಫೋಟೊ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ ನಮ್ಮದು ಜ್ಯಾತ್ಯಾತೀತ ರಾಷ್ಟ್ರ, ಜ್ಯಾತ್ಯಾತೀತ ಜನ, ಆದರೆ ಇಂತಹ ಕೆಲಸ ಮಾಡುವ ಮೊದಲು ನಮ್ಮ ಧರ್ಮದ ಬಗ್ಗೆ ಯೋಚಿಸಿ ‘ ಎಂದು ಸಲಹೆ ನೀಡಿದ್ದಾರೆ.
ಭಾಯಿಜಾನ್, ಹೊಸ ವರ್ಷವಾಗಿದ್ದರೆ ಪರವಾಗಿರಲಿಲ್ಲ, ಆದರೆ ಇದು ಕ್ರಿಸ್ಮಸ್. ಮುಸಲ್ಮಾನರ ಹಬ್ಬವಲ್ಲ. ಈ ಪೋಸ್ಟ್ ಡಿಲೀಟ್ ಮಾಡಿ ‘ ಎಂದಿದ್ದಾರೆ.
‘ ಕೈಫ್ ಸರ್ ನೀವು ಮುಸ್ಲಿಮ್ ಆಗಿದ್ದುಕೊಂಡು ಮೆರ್ರಿ ಕ್ರಿಸ್ಮಸ್ ಹೇಳಲು ನಾಚಿಕೆಯಾಗುವುದಿಲ್ಲವೇ ‘ ಎಂದು ಕೇಳಿದ್ದಾರೆ.
ಮೊಹಮ್ಮದ್ ಅಂತ ಹೆಸರಿಟ್ಟುಕೊಂಡರೆ ಮುಸ್ಲಿಮ್ ಆಗುವುದಿಲ್ಲ ‘ ಎಂದಿದ್ದಾರೆ. ‘ ಮುಸ್ಲಿಮ್ ಆಗಿ ಕ್ರಿಸ್ಮಸ್ ಆಚರಿಸಲು ನಾಚಿಕೆಯಾಗೊಲ್ಲವೆ, ಸ್ವಲ್ಪವಾದರೂ ದೇವರ ಬಗ್ಗೆ ಭಯ ಪಡಿ ‘ ಎಂದಿದ್ದಾರೆ.