ಚೆನ್ನೈ: ಉಲಗನಾಯಗನ್ ಕಮಲಹಾಸನ್ ತಮಿಳ್ನಾಡು ಪೊಲೀಸರು ಸ್ವರಾಜ್ ಅಭಿಯಾನ ನಾಯಕ ಯೋಗೇಂದ್ರ ಯಾದವ್‍ರ ಬಂಧಿಸಿರುವುದನ್ನು ಕಟುವಾಗಿ ಟೀಕಿಸಿದ್ದಾರೆ. ಯೋಗೇಂದ್ರಯಾದವ್‍ರಿಗೆ ಬೆಂಬಲ ಸೂಚಿಸಿದ ಅವರು ಯೋಗೇಂದ್ರ ಯಾದವ್‍ರನ್ನು ತನ್ನ ಸಹೋದರ ಎಂದು ಕರೆದಿದ್ದಾರೆ. ಇನ್ನೊಂದು ರಾಜ್ಯದ ಪೊಲಿಟಿಕಲ್ ಲೀಡರನ್ನು ಬಂಧಿಸಿದ ಕುರಿತು ತಮಿಳ್ನಾಡು ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು. ಇಲ್ಲಿಗೆ ಅವರು À ರೈತರ ಸಮಸ್ಯೆ ಅರಿತುಕೊಳ್ಳುವುದಕ್ಕಾಗಿ ಬಂದಿದ್ದಾರೆ. ಹಾಗಿದ್ದೂ ಅವರನ್ನು ಯಾಕೆ ಅವರನ್ನು ಬಂಧಿಸಲಾಯಿತು. ಅವರು ಖುದ್ದಾಗಿ ತಾನು ರೈತರ ಸಮಸ್ಯೆಯ ಅಧ್ಯಯನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರಲ್ಲ ಎಂದು ಕಮಲ್ ಪ್ರತಿಕ್ರಿಯಿಸಿದರು.

ಯೋಗೇಂದ್ರ ಯಾದವ್ ಬಂಧನ ಟೀಕಿಸುವಂತಹದ್ದು ಮತ್ತು ಖಂಡಿಸುವಂತಹದ್ದಾಗಿದೆ. ಅವರನ್ನು ಬಂಧಿಸುವ ಮೂಲಕ ತಮಿಳ್ನಾಡು ಸರಕಾರ ಅಭಿಪ್ರಾಯ ಸ್ವಾಂತ್ರ್ಯದ ಹನನಕ್ಕೆ ಯತ್ನಿಸುತ್ತಿದೆ. ಯೋಗೇಂದ್ರ ಯಾದವ್ ಅವರಾಗಿ ಬಂದಿಲ್ಲ ಪ್ರತಿಭಟನಾಕಾರರ ಕರೆ ಸ್ವೀಕರಿ ಬಂದಿದ್ದಾರೆ.ಇಲ್ಲಿ ಏನು ನಡೆಯುತ್ತಿದೆಎಂದು ತಿಳಿದು ಕೊಳ್ಳುವ ಉದ್ದೇಶದಿಂದ ಅವರಿಗಿತ್ತು ಎಂದು ಕಮಲ್ ಹಾಸನ್ ಹೇಳಿದರು.

10,000 ಕೋಟಿ ರೂಪಾಯಿ ವೆಚ್ಚದಲ್ಲಿ ಸೇಲಂ ಮತ್ತು ಚೆನ್ನೈಯನ್ನು ಜೋಡಿಸುವ ಹೊಸ ಎಕ್ಸ್‍ಪ್ರೆಸ್ ಹೈವೆ ನಿರ್ಮಾಣದ ವಿರುದ್ಧ ರೈತರ ಹೋರಾಟದಲ್ಲಿ ಭಾಗವಹಿಸಲಿಕ್ಕಾಗಿಯೋಗೇಂದ್ರ ಯಾದವ್ ನಿನ್ನೆ ಬಂದಾಗ ತಮಿಳ್ನಾಡು ಪೊಲೀಸರು ಬಂಧಿಸಿದ್ದರು.

Leave a Reply