ಬೆಂಗಳೂರು: ಕನ್ನಡದ ಸಿನಿಮಾ ನಟನೊಬ್ಬ ಯುವತಿಯೊಬ್ಬಳನ್ನು ಯಾಮಾರಿಸಿ ಮಂಚಕ್ಕೆ ಕರೆದು ತಂಪು ಪಾನೀಯದಲ್ಲಿ ಮತ್ತಿನ ಔಷದಿ ಬೆರೆಸಿ ಅತ್ಯಾಚಾರ ನಡೆಸಿದ ಪ್ರಕರಣವೊಂದು ನಡೆದಿದೆ.
ಅತ್ಯಾಚಾರಿ ಆರೋಪಿ ಹೊಂಬಣ್ಣ ಎಂಬ ಕನ್ನಡ ಚಿತ್ರದ ನಾಯಕ ನಟ ಸುಬ್ರಹ್ಮಣ್ಯ ಎಂಬವನಾಗಿದ್ದಾನೆ. ಪ್ರಸ್ತುತ ಅತ್ಯಾಚಾರ ಆರೋಪಿ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಕಳೆದ ಎರಡು ವರ್ಷಗಳಿಂದ ಅತ್ಯಾಚಾರ ಸಂತ್ರಸ್ತೆ ಯುವತಿಯ ಮನೆಯವರಿಗು ಪರಿಚಯವಿತ್ತು. ಕುಟುಂಬಸ್ಥರಿಗೆ ಸುಬ್ರಹ್ಮಣ್ಯ ಹತ್ತಿರವಾದಂತೆ ಯುವತಿಯ ಜೊತೆ ಮದುವೆ ಮಾತುಕತೆ ನಡೆಸಿದ್ದರು. ಅದಕ್ಕೆ ಆತನು ಒಪ್ಪಿದ್ದ ಇದರ ಮಧ್ಯೆ ಮದುವೆ ವಿಚಾರ ಪ್ರಸ್ತಾಪಿಸಿದಾಗ ತನ್ನ ಮೊದಲ ಸಿನಿಮಾ ಬಿಡುಗಡೆಗೊಳ್ಳಲಿ ಎಂದಿದ್ದ. ಸಿನಿಮಾ ಬಿಡುಗಡೆಯಾದ ಬಳಿಕ ಮನೆಯ ಗೃಹ ಪ್ರವೇಶ ಆದ ಬಳಿಕ ಎಂದು ಮಾತು ಕೊಟ್ಟಿದ್ದ ಎಂದು ವರದಿಯಾಗಿದೆ.
ನಟನ ಮಾತನ್ನು ನಂಬಿದ ಯುವತಿ ನವೆಂಬರ್ 1 ರಂದು ನಟನ ಸಹೋದರಿಯ ಮನೆಯಲ್ಲಿ ಪಾರ್ಟಿ ಇದೆ ಎಂದು ಆಕೆಯನ್ನು ಕರೆಸಿಕೊಂಡಿದ್ದ. ಆದರೆ ಅದು ಸಹೋದರಿಯ ಮನೆಯ ಬದಲು ತನ್ನ ರೂಮಿಗೆ ಕರೆದುಕೊಂಡು ಹೋಗಿ ಕುಡಿಯಲು ಜ್ಯೂಸ್ ನಲ್ಲಿ ಮತ್ತಿನ ಔಷದಿ ಬೆರೆಸಿ ಕೊಟ್ಟು ಆಕೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದ. ಆಕೆ ಎಚ್ಚರಗೊಂಡಾಗ ಆಕೆಯ ಮೈಮೇಲೆ ಬಟ್ಟೆ ಇರಲಿಲ್ಲ. ಯುವತಿ ಮದುಯಾಗಲು ಒತ್ತಾಯಿಸಿದಾಗ ನನಗೆ ಇಪ್ಪತ್ತು ಲಕ್ಷ ಹಣ ಬೇಕು ನನ್ನ ಮುಂದಿನ ಸಿನಿಮಾಕ್ಕೆ ನೀವು ಬಡವರು ನನಗೆ ಶ್ರೀಮಂತ ಹುಡುಗಿ ಬೇಕು ಎಂದಿದ್ದಾನೆ ಎಂದು ಸಂತ್ರಸ್ತೆ ಯುವತಿ ದೂರು ನೀಡಿದ್ದಾಳೆ.