ಪುತ್ತೂರು: ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಕುಟುಂಬದೊಂದಿಗೆ ಹಿಂದಿರುಗುತ್ತಿದ್ದ ಎಸ್ಡಿಪಿಐ ಪಕ್ಷದ ಯುವ ನಾಯಕರೂ ಮತ್ತು ಪುತ್ತೂರು ಎಸ್ಡಿಪಿಐ ನಗರ ಸಮಿತಿಯ ಅಧ್ಯಕ್ಷರೂ ಆದ ಹಂಝ ಅವರು ಕಾರ್ಯಕ್ರಮ ಒಂದರ ಫ್ಲೆಕ್ಸ್ ಅಳವಡಿಸುತ್ತಿದ್ದ ವೇಳೆ ಕಾರಿನಿಂದ ಇಳಿದು ಫ್ಲೆಕ್ಸ್ ಸರಿ ಪಡಿಸಲು ಯತ್ನಿಸಿದ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ಸ್ಥಳದಲ್ಲೇ ಮೃತಪತ್ತಿದ್ದಾರೆ.

ಕೂರ್ನಡ್ಕ ನಿವಾಸಿ ಹಂಝ ಅಫ್ನಾನ್ (40) ರವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಪುತ್ತೂರು ನಗರದ ದರ್ಬೆ ಬಳಿ ಸಂಭವಿಸಿದ್ದು, ಎಸ್ಡಿಪಿಐ ಕರಾವಳಿ ಕಾರ್ಯಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.

ಎಸ್ಡಿಪಿಐ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಸಾಮಾಜ ಸೇವಕರೂ ಮತ್ತು ಸಕ್ರಿಯ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

 

 

 

Leave a Reply