ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಮಾದಕ ವ್ಯಸನಿಯಾಗಿದ್ದ ಮಹಿಳೆ ಇತರ ಮಹಿಳೆಯರನ್ನು ಸಲಿಂಗ ಕಾಮಕ್ಕೆ ಬಳಸುತ್ತಿದ್ದಳು ಎಂದು ಆರೋಪಿಸಿ ಸಾರ್ವಜನಿಕರು ಆಕೆಗೆ ಹಿಗ್ಗಾ ಮುಗ್ಗಾ ಥಳಿಸುವ ವಿಡಿಯೋ ವೈರಲ್ ಆಗಿದೆ. ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪ್ರತೀ ನಿತ್ಯ ಮಹಿಳೆ, ಮಹಿಳೆಯರನ್ನು ಮನೆಗೆ ಕರೆದು ಕೊಂಡು ಬರುತ್ತಿದ್ದಳು ಎಂದು ಆರೋಪಿಸಲಾಗಿದೆ.

ಹೀಗೆ ಕೆಲ ದಿನಗಳ ಹಿಂದೆ ಮಹಿಳೆಯನ್ನು ಕರೆದು ಕೊಂಡು ಬಂದದ್ದನ್ನು ನೋಡಿದ ಸ್ಥಳೀಯರು ಆಕ್ರೋಶ ಗೊಂಡು ಮಹಿಳೆಗೆ ಥಳಿಸಿದ್ದಾರೆ. ಈ ವೇಳೆ ಘಟನೆಯ ವಿಡಿಯೋವನ್ನು ಮಾಡಲಾಗಿದ್ದು, ಘಟನೆ ಬಳಿಕ ಸ್ಥಳೀಯ ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಣೆ ಮಾಡಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ತಿಳಿಸಿದ್ದಾರೆ.

ಘಟನೆಯ ವಿಡಿಯೋವನ್ನು ನೋಡಿದ್ದೇವೆ, ಆದರೆ, ಈ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

Leave a Reply