ಚೆನ್ನೈ: ಬುಧವಾರ ನಡೆಸುವ ಬ್ರಹತ್ ರ್ಯಾಲಿಯಲ್ಲಿ ತನ್ನ ಶಕ್ತಿಯೇನೆಂದು ಬಹಿರಂಗಗೊಳಿಸುವೆನೆಂದು ಇತ್ತೀಚೆಗೆ ನಿಧನರಾದ ಡಿಎಂಕೆ ನೇತಾರ ಕರುಣಾನಿಧಿಯ ಪುತ್ರ ಎಂಕೆ ಅಳಗಿರಿಯವರು ಡಿಎಂಕೆ ಗೆ ಸವಾಲೆಸೆದಿದ್ದಾರೆ. ಅವರು ಮಧುರೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ರ್ಯಾಲಿ ಮುಕ್ತಾಯಗೊಳ್ಳುವಾಗ ನನ್ನ ಶಕ್ತಿಯೇನೆಂದು ಸ್ಟಾಲಿನ್ ಮತ್ತು ಅವರೊಂದಿಗಿರುವ ಕಾರ್ಯಕರ್ತರಿಗೂ ತಿಳಿಯಲಿದೆಯೆಂದೂ ಹೇಳಿದರು. ಬುಧವಾರ ಕರುಣಾ ನಿಧಿಯ ಸಮಾಧಿಯವರೆಗೆ ಅಳಗಿರಿ ಮತ್ತವರ ಬೆಂಬಲಿಗರು ಬ್ರಹತ್ ರ್ಯಾಲಿಯೊಂದನ್ನು ಸಂಘಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ರ್ಯಾಲಿಯು ಶಾಂತಿಯುತವಾಗಿ ನಡೆಯಲಿದ್ದು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದೂ ಅವರು ಹೇಳಿದರು,

Leave a Reply