image credit : flickr

ಇಂದು ಮಹಿಳೆಯರಿಗೆ ಒಂದು ದೊಡ್ಡ ದೂರು ಏನಂದರೆ ವೇಸ್ಟ್(ತ್ಯಾಜ್ಯಗಳನ್ನು) ಹಾಕಲು ಸ್ಥಳವಿಲ್ಲ ಎಂಬುದು. ಐದು ಬೆರಳುಗಳಲ್ಲಿ ಐದು ಕವರುಗಳಂತೆ ಹಿಡಿದು ಕೊಂಡು ನಾವು ಮನೆಯೊಳಗೆ ಬರುತ್ತೇವೆ. ಒಂದರಲ್ಲಿ ಮೀನು, ಇನ್ನೊಂದರಲ್ಲಿ ಹಾಲು, ಮತ್ತೊಂದರಲ್ಲಿ ತರಕಾರಿ, ಹಣ್ಣುಹಂಪಲುಗಳು, ಮತ್ತೊಂದರಲ್ಲಿ ಬೇಕರಿ ವಸ್ತುಗಳು…

ಹೀಗೆ ಬಳಿಕ ಎಲ್ಲಾ ತ್ಯಾಜ್ಯಗಳನ್ನು, ಚೀಲ ಗಳನ್ನು ಒಂದು ದೊಡ್ಡ ಕಟ್ಟು ಮಾಡಿ ಎಲ್ಲಾ ದರೂ ರಸ್ತೆ ಪಕ್ಕದಲ್ಲೂ ಸಮೀಪದ ಜನವಾಸವಿಲ್ಲದ ಸ್ಥಳಕ್ಕೋ ಬಿಸಾಡುತ್ತೇವೆ. ಇದೇ ಹೆಚ್ಚಿನ ಗೃಹಿಣಿಯರ ಹವ್ಯಾಸ. ಆದರೆ ನಾವು ಮನಸ್ಸು ಮಾಡಿದರೆ ಈ ವಸ್ತುಗಳಿಂದ, ಕೀಟನಾಶಕಗಳು, ಆಹಾರ ಬೇಯಿಸಲು ಇಂಧನಗಳನ್ನು ಮಾಡಲು ಸಾಧ್ಯವಿದೆ.ತ್ಯಾಜ್ಯ ವಸ್ತುಗಳು ಬಿಸಾಡಬೇಕಾದುದಲ್ಲ. ಮನೆಯ ತ್ಯಾಜ್ಯಗಳಲ್ಲಿ ಹಾಳಾಗುವ ಮತ್ತು ಹಾಳಾಗದೆ ಎರಡು ರೀತಿಯ ಮಾಲಿನ್ಯಗಳಿರುತ್ತವೆ. ಅವರೆಡನ್ನು ಬೆರೆಸದೆ ಬೇರ್ಪಡಿಸಿಡಬೇಕಾದುದೇ ಮಾಲಿನ್ಯ ಸಂಸ್ಕರಿಸುವ ಮೊದಲ ಹೆಜ್ಜೆ.

ಬೇಯಿಸಿದ ಆಹಾರ ಪದಾರ್ಥಗಳು  

ಅಡುಗೆಗಾಗಿ ಬಳಸಿ ಉಳಿದ ಪದಾರ್ಥಗಳು, ಮೀನು, ಮಾಂಸ, ಹಣ್ಣು ಮೊದಲಾದವುಗಳ ಅವಶೇಷಗಳನ್ನು ಸೇರಿಸಿ ಒಂದು ಬಕೆಟ್ – (ಬಿನ್)ನಲ್ಲಿ ಹಾಕಬೇಕು. ಇದನ್ನು ಅಡುಗೆ ಮನೆಯ ಹಿಂಬದಿಯಿರುವ ಸ್ಥಳದಲ್ಲೇ ಇರಿಸುವುದು ಉತ್ತಮ. ಐದು ಸದಸ್ಯರಿರುವ ಕುಟುಂಬಕ್ಕೆ 10-15 ಲೀಟರ್ ಹಿಡಿಯುವ ಬಕೆಟ್ ಸಾಕಾಗುತ್ತದೆ. ಹೀಗೆ ಶೇಖರಿಸಿದ ಅಡುಗೆ ಮನೆಯ ಮಾಲಿನ್ಯವನ್ನು ಗೊಬ್ಬರ ನಿರ್ಮಾಣಕ್ಕೆ ಉಪಯೋಗಿಸಬಹುದು. ಒಂದು ಸಣ್ಣ ಮರದ ಪೆಟ್ಟಿಗೆಯಲ್ಲೋ, ಹಸಿ ಸೆಗಣಿಯೊಟ್ಟಿಗೆ ಹಸಿರು ತರಕಾರಿ ಅವಶೇಷಗಳನ್ನು ಇಟ್ಟರೆ ಎರಡು ವಾರಗಳಲ್ಲಿ ಇವು ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ. ಅಲ್ಲದಿದ್ದರೆ, 20 ಲೀಟರ್ ನೀರು ಹಿಡಿಯುವ ಎರಡು ಮಣ್ಣಿನ ಮಡಕೆಗಳನ್ನು ಸೇರಿಸಿ ಒಂದು ತೂತು ಮಾಡಿ. ಆದರೆ ಮೇಲ್ಬಾಗದಲ್ಲೂ 4 ದ್ವಾರಗಳನ್ನು ಮಾಡಿ. 15 ಸೆಂಟಿಮೀಟರ್ ಎತ್ತರದಲ್ಲಿ ಬೇರೆ ಬೇರೆ ಸ್ಟಾಂಡ್‌ನಲ್ಲಿ ಈ ಪಾತ್ರೆಯನ್ನು ಇಡಿ. ಪಾತ್ರೆಯ ತೂತಿನಿಂದ ಇಳಿಯುವ ನೀರನ್ನು ಸಂಗ್ರಹಿಸಲು ಅಡಿಯಲ್ಲಿ ಪಾತ್ರೆ ಯನ್ನು ಇಡಬೇಕು. ಅಡುಗೆ ಮನೆಯ ತ್ಯಾಜ್ಯಗಳನ್ನು ನಿತ್ಯವೂ ಸಂಗ್ರಹಿಸಿ ಮೊದಲ ಮಣ್ಣಿನ ಪಾತ್ರೆಯನ್ನು ತುಂಬಿಸಿ ಅದು ತುಂಬಿದ ಬಳಿಕ ಎರಡನೇ ಪಾತ್ರೆಗೆ ತ್ಯಾಜ್ಯ ವನ್ನು ಹಾಕಲು ಆರಂಭಿಸಬೇಕು. ಎರಡು ತಿಂಗಳವರೆಗೆ ತುಂಬಿದ ಮಣ್ಣಿನ ಪಾತ್ರೆ ಯನ್ನು ಹಾಗೆಯೇ ಬಿಡಿ. ಆಗ ಗೊಬ್ಬರ ತಯಾರಾಗಿರುತ್ತದೆ. ಪಾತ್ರೆಯ ಕೆಳಗಿರಿಸಿದ ಪಾತ್ರೆಯಲ್ಲಿನ ನೀರಿಗೆ ಅದರ ಎರಡರಷ್ಟು ನೀರು ಸೇರಿಸಿ ವರ್ಮಿವಾಷ್ ಆಗಿ ಉಪಯೋಗಿಸಬಹುದು.

ಕೊಳೆಯದ ತ್ಯಾಜ್ಯಗಳು

ಪ್ಲಾಸ್ಟಿಕ್, ಕಬ್ಬಿಣ, ರಬ್ಬರ್, ಪೇಪರ್ ತುಂಡುಗಳು, ಪ್ಲಾಸ್ಟಿಕ್ ಚೀಲಗಳು ಮೊದ ಲಾದವನ್ನು ಬಕೆಟಲ್ಲಿ ಹಾಕಬೇಕು. ಫ್ಲಾಟ್ ಗಳಲ್ಲಿ ವಾಸಿಸುವವರಿಗೆ ಹೆಚ್ಚು ಸ್ಥಳವಿಲ್ಲ ದಿರುವುದರಿಂದ ಹೀಗೆ ಶೇಖರಿಸಿದ ವಸು ಗಳನ್ನು, ಹಳೆಯ ವಸ್ತುಗಳನ್ನು ಮಾರುವ ಅಂಗಡಿಗಳಿಗೋ ಅಥವಾ ಶೇಖರಿಸುವ ವ್ಯಕ್ತಿಗಳಿಗೆ ನೀಡಬಹುದು. ಅದನ್ನು ವಿಂಗಡಿಸಿಟ್ಟರೆ ಉತ್ತಮ. ಉಪಯೋಗಿಸಿದ ನೀರು ಮನೆಯಲ್ಲಿ ಉಪಯೋಗಿಸಿ ಹೊರಗೆ ಬಿಡುವ ನೀರೇ ಇನ್ನೊಂದು ದೊಡ್ಡ ಸಮಸ್ಯೆ. ನೀರು ಸರಿಯಾಗಿ ಹೋಗದೆ ನಿಂತು ಬಿಟ್ಟರೆ ಸೊಳ್ಳೆಗಳ ಕಾಟ, ಅದರೊಂದಿಗೆ ಮಾರಕ ರೋಗಗಳು ಹೆಚ್ಚುವ ಸಾಧ್ಯತೆಯೂ ಇದೆ. ಆದ್ದರಿಂದ ಪಾತ್ರೆ, ಕೈ-ಕಾಲು ತೊಳೆಯುವ ನೀರನ್ನು ಹೆಚ್ಚು ಗುಂಡಿ ತೋಡದೆ ಹರಿದು ಹೋಗುವ ಚರಂಡಿಗಳನ್ನು ಮಾಡಿ ತೋಟ, ಹೂವಿನ ತೋಟಕ್ಕೂ ಬಿಡಬೇಕು. ಇದರಿಂದ ನಮ್ಮ ತೋಟವು ಫಲವತ್ತಾಗುವುದು.

LEAVE A REPLY

Please enter your comment!
Please enter your name here