ಇದು ನಮ್ಮ ಊರು: ಕಾಶಿಯ ನಿವಾಸಿ ಸುಮಾರು 24 ವರ್ಷದ ಅಮನ್ ಕಬೀರ್, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ದಾರಾನಗರ ಪ್ರದೇಶದ ಹಿರಿಯ ನಿವಾಸಿ ನಿಧನ ಹೊಂದಿದ್ದು, ಹಿರಿಯ ವ್ಯಕ್ತಿಗೆಈ ಜಗತ್ತಿನಲ್ಲಿ ಯಾರೂ ಇಲ್ಲ. ಅವರು ರಸ್ತೆಯಲ್ಲಿ ಮಲಗುತ್ತಿದ್ದರು. ಸುತ್ತಲಿನ ಜನರು ಅವನನ್ನು ಹೀರು ಚಾಚಾ ಎಂದು ಕರೆಯುತ್ತಿದ್ದರು. ಆದರೆ ಆ ಹಿರಿಯ ವ್ಯಕ್ತಿ ಮರಣ ಹೊಂದಿದಾಗ ಕೋರೋಣ ಕಾರಣದಿಂದ ಯಾರೂ ಹತ್ತಿರ ಸುಳಿಯಲಿಲ್ಲ.

ಈ ವಿಷಯ ಅಮನ್ ನಿಗೆ ತಿಳಿದು, ಕೂಡಲೇ ತನ್ನ ಆಂಬ್ಯುಲೆನ್ಸ್ ಹೆಸರಿನ ಬೈಕ್ ನಲ್ಲಿ ಅವರ ಬಳಿ ತಲುಪುತ್ತಾರೆ. ಅವರ ಬೈಕ್ ಸುತ್ತಮುತ್ತಲಿನವರಿಗೆ ಆಂಬುಲೆನ್ಸ್, ಯಾಕೆಂದರೆ ಎಲ್ಲಾದರೂ ಏನಾದರೂ ಸೇವೆ ಬೇಕಿದ್ದರೆ ಕಬೀರ್ ಕೂಡಲೇ ತಲುಪುತ್ತಾರೆ. ಅಮನ್ ಬಂದುದನ್ನು ನೋಡಿ ಸ್ಥಳೀಯ ಕೆಲವು ಯುವಕರಿಗೂ ಧೈರ್ಯ ಬಂತು. ಅವರು ಆ ಹಿರಿಯ ವ್ಯಕ್ತಿಯ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸಿದರು ಮತ್ತು ಸ್ಥಳೀಯ ಯುವಕರು ಅವರಿಗೆ ಭುಜ ಕೊಟ್ಟರು.

ಬಳಿಕ ಅವರು ಮೃತ ದೇಹವನ್ನು ಸ್ಥಳೀಯ ಶವಾಗಾರಕ್ಕೆ ಕೊಂಡು ಹೋಗಿ ಅಲ್ಲಿ ಶವ ಸಂಸ್ಕಾರ ಮಾಡಿದರು. ಹೀರು ಚಚಾರ ಅಂತ್ಯ ಕ್ರಿಯೆ ನಡೆಯುವಾಗ ಅಮನ್ ಮತ್ತು ಸ್ಥಳೀಯ ಜನರು ಹರ್ ಹರ್ ಮಹದೇವ್ ಎಂದು ಜಪಿಸುತ್ತಿದ್ದರು.

Leave a Reply